ಕಾಡಾನೆ ಹಾವಳಿ: ಕರೆಂಟ್ ಕಂಬ ಉರುಳಿಸಿ, ರಸ್ತೆ ಮಧ್ಯೆ ಬೈನೆ ಮರ ಕೆಡವಿದ ಕಾಡಾನೆ; ತಕ್ಷಣ ಕ್ರಮಕ್ಕೆ ದೇವಲಕೆರೆ ಗ್ರಾಮಸ್ಥರಆಗ್ರಹ

ಕಾಡಾನೆ ಹಾವಳಿ: ಕರೆಂಟ್ ಕಂಬ ಉರುಳಿಸಿ, ರಸ್ತೆ ಮಧ್ಯೆ ಬೈನೆ ಮರ ಕೆಡವಿದ ಕಾಡಾನೆ; ತಕ್ಷಣ ಕ್ರಮಕ್ಕೆ ದೇವಲಕೆರೆ ಗ್ರಾಮಸ್ಥರಆಗ್ರಹ

ಸಕಲೇಶಪುರ, ಆ. 7: ತಾಲೂಕಿನ ದೇವಲಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಬಣಾಲ್ ಗ್ರಾಮದಲ್ಲಿ ಕಾಡಾನೆಯೊಂದು ವಿದ್ಯುತ್ ಕಂಬವನ್ನು ಉರುಳಿಸಿರುವ ಘಟನೆ ಸಂಭವಿಸಿದ್ದು, ಇದೇ ಆನೆ ಗುಡ್ಡಗಂಡಿ ಪ್ರದೇಶದಲ್ಲಿ ರಸ್ತೆ ಮಧ್ಯೆ ಮರವನ್ನು ಕೆಡವಿ ಸಂಚಾರಕ್ಕೂ ಅಡ್ಡಿಪಡಿಸಿದೆ. ಈ ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.ಕಳೆದ ಸುಮಾರು ಒಂದು ತಿಂಗಳಿಂದ ಈ ಕಾಡಾನೆ ಬಣಾಲ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಕಾಫಿ ತೋಟಗಳು ಹಾಗೂ ವಿವಿಧ ಕೃಷಿ ಬೆಳೆಗಳಿಗೆ ನಿರಂತರ ಹಾನಿಉಂಟುಮಾಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿ ತೀವ್ರಗೊಳ್ಳುತ್ತಿದ್ದು, ರೈತರು ಹಾಗೂ ಸಾರ್ವಜನಿಕರು ಭಯದ ವಾತಾವರಣದಲ್ಲಿಜೀವನ ನಡೆಸುವಂತಾಗಿದೆ ಎಂದು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!