ನಾಡಪ್ರಭು ಕೆಂಪೇಗೌಡ ಯುವ ವೇದಿಕೆಗೆ ಅರುಣ್ ಗೌಡ ಕರಡಿಗಾಲ ಹೊಸ ಮಾಧ್ಯಮ ಪ್ರತಿನಿಧಿ

ಸಕಲೇಶಪುರ: ತಾಲ್ಲೂಕು ನಾಡಪ್ರಭು ಕೆಂಪೇಗೌಡ ಯುವ ವೇದಿಕೆಯ ಮಾಧ್ಯಮ ಪ್ರತಿನಿಧಿಯಾಗಿ ಪತ್ರಕರ್ತ ಹಾಗೂ ಸಾಮಾಜಿಕ ಕಳಕಳಿಯುಳ್ಳ ಅರುಣ್ ಗೌಡ ಕರಡಿಗಾಲ ಅವರನ್ನು ಆಯ್ಕೆ ಮಾಡಲಾಗಿದೆ.ಮಾಧ್ಯಮ ಕ್ಷೇತ್ರದಲ್ಲಿನ ಅವರ ಅನುಭವ ಹಾಗೂ ಸಾಮಾಜಿಕ ಕಳಕಳಿಯನ್ನು ಪರಿಗಣಿಸಿ ಈ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ಪ್ರಸಾದ್ ಗೌಡ ತಿಳಿಸಿದ್ದಾರೆ.ವೇದಿಕೆಯ ಆಶಯಗಳು, ಸಮಾಜಮುಖಿ ಕಾರ್ಯಕ್ರಮಗಳು ಹಾಗೂ ಸಂಘಟನೆಯ ವಿವಿಧ ಚಟುವಟಿಕೆಗಳನ್ನು ಮಾಧ್ಯಮದ ಮೂಲಕ ಜನರಿಗೆ ತಲುಪಿಸುವಲ್ಲಿ ಅರುಣ್ ಗೌಡ ಕರಡಿಗಾಲ ಅವರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಹೊಸ ಜವಾಬ್ದಾರಿ ಸ್ವೀಕರಿಸಿರುವ ಅರುಣ್ ಗೌಡ ಕರಡಿಗಾಲ ಅವರಿಗೆ ವೇದಿಕೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!