ಪ್ಲಾಂಟರ್ಸ್ ಸಂಘದ ಕಾರ್ಯಕಾರಿ ಮಂಡಳಿ ಸಭೆ ನಾಳೆ
ಸಕಲೇಶಪುರ: ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ (ರಿ.) 2026–28ನೇ ಸಾಲಿನ ಕಾರ್ಯಕಾರಿ ಮಂಡಳಿಯ 3ನೇ ಮಾಸಿಕ ಸಭೆ ಆ.11ರಂದು ಬೆಳಿಗ್ಗೆ 11 ಗಂಟೆಗೆ ಸಕಲೇಶಪುರದ ಆನೆಮಹಲ್‌ನ ದುರ್ಗಾ ಇಂಟರ್‌ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ.ಸಂಘದ ಅಧ್ಯಕ್ಷ ಮಂಜುನಾಥ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಹಿಂದಿನ ಸಭೆಯ ನಡವಳಿಕೆ, ಪ್ರಮುಖ ಪತ್ರವ್ಯವಹಾರಗಳು, ಕೆಜಿಎಫ್ ಮಾಸಿಕ ಸಭೆಯಲ್ಲಿ ನಡೆದ ಚರ್ಚೆ ಹಾಗೂ ತೀರ್ಮಾನಗಳು ಮತ್ತು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ವತಿಯಿಂದ ನಡೆದ ಬೆಳೆಗಾರರ ಕುಂದುಕೊರತೆ ಹಾಗೂ ಅಹವಾಲು ಸಭೆಯಲ್ಲಿ ಸಲ್ಲಿಸಿದ ಮನವಿಗಳ ಕುರಿತು ಚರ್ಚಿಸಲಾಗುವುದು.ಕಾಡಾನೆ ಸಮಸ್ಯೆ, ಸರ್ಫೇಸಿ ಕಾಯ್ದೆ, 12ನೇ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ, ರೈತ–ಬೆಳೆಗಾರರಿಗೆ ಸಂಬಂಧಿಸಿದ ಕಂದಾಯ ವಿಚಾರಗಳು ಹಾಗೂ ತೋಟಗಾರಿಕೆ ಇಲಾಖೆಯ ಸೇವೆ–ಸೌಲಭ್ಯಗಳ ಕುರಿತು ಸಭೆಯಲ್ಲಿ ಮಾಹಿತಿ ಪಡೆಯಲಾಗುವುದು. ಲೆಕ್ಕಪತ್ರ ಮಂಡನೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆಯೂ ಚರ್ಚೆ ನಡೆಯಲಿದೆ.ಸಭೆಗೆ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಸದಸ್ಯರು ತಪ್ಪದೇ ಭಾಗವಹಿಸಿ ಸಲಹೆ–ಸಹಕಾರ ನೀಡುವಂತೆ ಸಂಘದ ಗೌರವ ಕಾರ್ಯದರ್ಶಿ ಹೆಗ್ಗೋವೆ ಪುಟ್ಟರಾಜು ಮನವಿ ಮಾಡಿದ್ದಾರೆ.
