ಮಲೆನಾಡು ರಕ್ಷಣಾ ಸೇನೆಯ ಹಾನುಬಾಳು ಹೋಬಳಿ ಘಟಕದ ಉದ್ಘಾಟನೆ ಹಾಗೂ ಅಧ್ಯಕ್ಷರ ಆಯ್ಕೆ

ಸಕಲೇಶಪುರ :ತಾಲ್ಲೂಕಿನ ಹಾನುಬಾಳು ಹೋಬಳಿ ಘಟಕವನ್ನು ಮಲೆನಾಡು ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷರಾದ ಡಾ. ಸಾಗರ್ ಜಾನೇಕೆರೆಯವರ ಅಧ್ಯಕ್ಷತೆಯಲ್ಲಿ ಉದ್ಘಾಟಿಸಿ ಪ್ರೀತಮ್ ಹಾದಿಗೆಯವರನ್ನು ಹೋಬಳಿ ಘಟಕದ ಅಧ್ಯಕ್ಷರಾಗಿ ಆಯ್ಕೆಮಾಡಿ ಮಲೆನಾಡು ರಕ್ಷಣಾ ಸೇನೆಯ ಸಕಲೇಶಪುರ ತಾಲ್ಲೂಕು ಅಧ್ಯಕ್ಷರಾದ ಮಂಜುದೇವ್ ಹುಲ್ಲಹಳ್ಳಿಯವರು ನೂತನ ಅಧ್ಯಕ್ಷರಿಗೆ ಕನ್ನಡ ಭಾವುಟ ನೀಡುವುದರೊಂದಿಗೆ ಜವಾಬ್ಧಾರಿ ನೀಡಿರುತ್ತಾರೆ.ಹಾಗೆಯೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯಾಧ್ಯಕ್ಷರು ನೂತನ ಹೋಬಳಿ ಅಧ್ಯಕ್ಷರಿಗೆ ಹಾಗೂ ಸಂಘಟನೆಯ ಪದಾಧಿಕಾರಿಗಳಿಗೆ ಸಂಘಟನೆಯ ಬಗ್ಗೆ ಹಲವು ವಿಚಾರಗಳನ್ನು ತಿಳಿಸಿ ಸಂವಿಧಾನಿಕವಾಗಿ ಹಾಗೂ ಸಾಮಾಜಿಕವಾಗಿ ಕಾರ್ಯಗಳನ್ನು ನಡೆಸಲು ಸಲಹೆಗಳನ್ನು ನೀಡಿದರು.ಈ ಸಂಧರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ನಾಗೇಂದ್ರ ಪಟೇಲ್,ತಾ.ಉಸ್ತುವಾರಿ ಚಂದ್ರಶೇಖರ್,ತಾ.ಯುವಘಟಕದ ಅಧ್ಯಕ್ಷರಾದ ವಿನಯ್ ದೋಣಿಗಾಲ್,ಕೌಡಳ್ಳಿ ಘಟಕದ ಅಧ್ಯಕ್ಷರಾದ ಗಿರೀಶ್,ಮಳಲಿ ಅಧ್ಯಕ್ಷರಾದ ಗೌತಮ್,ಬಾಗೆ ಘಟಕದ ಅಧ್ಯಕ್ಷರಾದ ಶೇಖರ್ ,ರಂಜನ್ ,ಸಾಗರ್ ಹಾದಿಗೆ,ಮಣಿ,ದಿಲೀಪ್,ಹಾಗೂ ಬಾಗೆ ಘಟಕದ ಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!