ಭೀಕರ ರಸ್ತೆ ಅಪಘಾತ: ಹಾಸನದಲ್ಲಿ KSRTC ಅಧಿಕಾರಿ ದುರ್ಮರಣ

ಆಲೂರು:ತಾಲ್ಲೂಕಿನ ಚನ್ನಹಳ್ಳಿ (ಚೌಳಗೆರೆ ಟೋಲ್) ಬಳಿ ಇಂದು ಬೆಳಿಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯ ಹಿರಿಯ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ.ಮೃತಪಟ್ಟವರನ್ನು ಹಾಸನ ವಿಭಾಗದ ತನಿಖಾ ದಳದ (ಚೆಕಿಂಗ್ ಇನ್ಸ್‌ಪೆಕ್ಟರ್) ಅಧಿಕಾರಿ ಶಕುನಿಗೌಡ (57) ಎಂದು ಗುರುತಿಸಲಾಗಿದೆ.

ಘಟನೆ ವಿವರ:ಇಂದು, ಡಿಸೆಂಬರ್ 13, ಶನಿವಾರದಂದು, ಬೆಳಿಗ್ಗೆ 8 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ಚನ್ನಹಳ್ಳಿ (ಚೌಳಗೆರೆ ಟೋಲ್) ಬಳಿ ಅರಕಲಗೂಡು ಕೋಟೆ ಬೀದಿ ಮೂಲದ ಶಕುನಿಗೌಡ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಥವಾ ರಸ್ತೆಯಲ್ಲಿ ಇದ್ದಾಗ ವೇಗವಾಗಿ ಬಂದ ಲಾರಿಯೊಂದು ಅವರ ಮೇಲೆ ಹರಿದಿದೆ. ಅಪಘಾತದ ತೀವ್ರತೆಯಿಂದಾಗಿ ಸ್ಥಳದಲ್ಲಿಯೇ ಶಕುನಿಗೌಡ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಶಕುನಿಗೌಡ ಅವರು KSRTC ಯಲ್ಲಿ ಪ್ರಾಮಾಣಿಕ ಮತ್ತು ಕರ್ತವ್ಯನಿಷ್ಠ ಅಧಿಕಾರಿಯಾಗಿ ಹೆಸರುವಾಸಿಯಾಗಿದ್ದರು. ಅವರ ಅಕಾಲಿಕ ಮರಣವು ಸಾರಿಗೆ ಇಲಾಖೆಯ ಸಿಬ್ಬಂದಿ ಹಾಗೂ ಕುಟುಂಬ ಸದಸ್ಯರಲ್ಲಿ ತೀವ್ರ ಶೋಕವನ್ನು ಉಂಟುಮಾಡಿದೆ.ಅಪಘಾತಕ್ಕೆ ನಿಖರವಾದ ಕಾರಣ ಬಸ್ ಅಡ್ಡ ಹಾಕುವ ಸಮಯದಲ್ಲಿ ಇದೇ ವೇಳೆ ಲಾರಿ(ಕ್ಯಾಂಟರ್) ಅಡ್ಡ ಬಂದ ಪರಿಣಾಮ‌ ಲಾರಿ ಚಾಲಕನ ನಿರ್ಲಕ್ಷ್ಯದ ಬಗ್ಗೆ ಆಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.ಈ ಸಂದರ್ಭದಲ್ಲಿ NHAI 24×7 ನೆರವಿಗೆ ದಾವಿಸಿದೆ ಆದರೂ ಅದಾಗಲೇ ಜೀವ ಹೊರಟು ಹೋಗಿತ್ತು .

Leave a Reply

Your email address will not be published. Required fields are marked *

error: Content is protected !!