ವಿದ್ಯುತ್ ದುರಸ್ತಿ ವೇಳೆ, ಸೆಸ್ಕ್ ಲೈನ್ ಮ್ಯಾನ್ ಗೋಪಿಗೆ ಗಂಭೀರ ಗಾಯ

ಸಕಲೇಶಪುರ: ವಿದ್ಯುತ್ ದುರಸ್ತಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಸೆಸ್ಕ್ ಲೈನ್‌ಮ್ಯಾನ್ ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಹಲಸುಲಿಗೆ ಗ್ರಾಮದಲ್ಲಿ ಬುಧುವಾರ ಸಂಭವಿಸಿದೆ.
ಪಟ್ಟಣದ ಕುಶಾಲನಗರ ಬಡಾವಣೆ ನಿವಾಸಿ, ಸೆಸ್ಕ್ ಲೈನ್‌ಮ್ಯಾನ್ ಗೋಪಿ (37) ಗಾಯಗೊಂಡ
ಸಿಬ್ಬಂದಿಯಾಗಿದ್ದಾರೆ.
ಉದೇವಾರ ಫೀಡರ್ ವ್ಯಾಪ್ತಿಯ ಹಲಸುಲಿಗೆ ಕ್ಯಾಂಪ್‌ನಲ್ಲಿ ವಿದ್ಯುತ್ ತಂತಿಗಳ ದುರಸ್ತಿ ಕಾರ್ಯ ನಡೆಯುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಗಂಭೀರವಾಗಿ ಗಾಯಗೊಂಡ ಗೋಪಿ ಅವರನ್ನು ಮೊದಲು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಹಾಸನದ ಆಸ್ಪತ್ರೆಗೆ  ಕರೆದೊಯ್ಯಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!