
ಇದು ಕೆಇಬಿ ಇಲಾಖೆ
ಸಕಲೇಶಪುರ, ಸಾರ್ವಜನಿಕ ಪ್ರಕಟಣೆ :
ಸಕಲೇಶಪುರ:ಪಟ್ಟಣದಲ್ಲಿ ಅವಶ್ಯಕತೆ ಇರುವ ಕಡೆ, ಹಾಲಿ ಇರುವ ಅಲುಮಿನಿಯಂ ವಾಹಕವನ್ನು ಹೊಸ ಎಬಿ ಕೇಬಲ್ ನಿಂದ ಬದಲಾಯಿಸುವ ಕಾಮಗಾರಿಯು ಚಾಲ್ತಿ ಇರುವುದರಿಂದ ದಿನಾಂಕ: 18.02.2026 ರಂದು ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ ಕಾಮಗಾರಿ ಮುಗಿಯುವವರೆಗೂ, ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯವಾಗುತ್ತದೆ ಹಾಗೂ ಸಾರ್ವಜನಿಕರು ಸಹಕರಿಸಬೇಕಾಗಿ ಈ ಮೂಲಕ ಕೋರಲಾಗಿದೆ.
1. ಬ್ರಾಹ್ಮಣರ ಬೀದಿ
2. ಹೊಳೆ ಬೀದಿ
3. ಕ್ರಾಫರ್ಡ್ ಫೀಲ್ಡ್ ಸುತ್ತಾ ಮುತ್ತಾ ಅಂಡ್ ಸಂಪೂರ್ಣ ಗ್ಯಾರೇಜ್ ಲೈನ್
4. ಕೆ ಎಸ್ ಆರ್ ಟಿ ಸಿ ಡಿಪೋ ಸುತ್ತಾ ಮುತ್ತಾ
5. ಹರಿಶ್ಚಂದ್ರ ವಠಾರ
ಈ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದೆ ಎಂದು ಸಹಾಯಕ ಇಂಜಿನಿಯರ್ (ವಿ )ನಿರಂಜನ್ ಕೆ. ಆರ್. ತಿಳಿಸಿದ್ದಾರೆ.
