

ಸಕಲೇಶಪುರ : ಪಟ್ಟಣದ ಸೆಂಟ್ ಆಗ್ನೇಸ್ ಪಿಯು ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ಕಾಲೇಜಿನ ಆವರಣದಲ್ಲಿ ಯೋಗ ಗುರುಗಳಾದ ಲಕ್ಷ್ಮಣ್ ಕೀರ್ತಿ ಅವರ ಉಪಸ್ಥಿತಿಯಲ್ಲಿ ಯೋಗ ಕಾರ್ಯಕ್ರಮವನ್ನು ಆಚರಿಸಲಾಯಿತು. ಯೋಗವು ವಿಶ್ವದಾದ್ಯಂತ ಗೌರವ ಪಡೆದಿದ್ದು, ಜೂನ್ 21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ವ್ಯವಸ್ಥಾಪಕರಾದ ಹರೀಶ್, ಉಪನ್ಯಾಸಕರಾದ ಅನುಸೂಯ, ಕುಮಾರಿ, ಮಂಜುನಾಥ್, ಹರ್ಷಿತ, ಗೀತಾ, ಚೇತನ್, ಜಯಶಂಕರ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
