ವೈದ್ಯರಿಗೆ ಗಿಡ ನೀಡಿ ಗೌರವ ಸಲ್ಲಿಸಿದ ಸಂಸ್ಕೃತಿ ಇಂಟರ್ನಾಷನಲ್ ಶಾಲೆಯ ವಿದ್ಯಾರ್ಥಿಗಳು

ಸಕಲೇಶಪುರ: ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಇಂದು ಸಂಸ್ಕೃತಿ ಇಂಟರ್ನಾಷ ನಲ್ ಸ್ಕೂಲ್ ವತಿಯಿಂದ ವಿದ್ಯಾರ್ಥಿಗಳು ಪಟ್ಟಣದ ವಿವಿಧ ಆಸ್ಪತ್ರೆಗಳು ಹಾಗೂ ಕ್ಲಿನಿಕ್ ಗಳಿಗೆ ಭೇಟಿ ನೀಡಿ ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿಗೆ ಗಿಡಗಳನ್ನು ನೀಡಿ ಗೌರವ ಸಲ್ಲಿಸಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿ ಗಳು ಸರ್ಕಾರಿ ಆಸ್ಪತ್ರೆ,ರೈಲ್ವೆ ಆಸ್ಪತ್ರೆ, ಗಣೇಶ್ ಕ್ಲಿನಿಕ್, ಕಿರಣ್ ಕ್ಲಿನಿಕ್, ಕಮಲ್‌ ದೇವ್‌ ಆಸ್ಪತ್ರೆ ಹಾಗೂ ಬೆನಕ ಡೆಂಟಲ್ ಕ್ಲಿನಿಕ್‌ಗೆ ಭೇಟಿ ನೀಡಿ ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿಗೆ ವೈದ್ಯರ ದಿನದ ಶುಭಾಶಯಗಳನ್ನು ತಿಳಿಸಿದರು. ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಉದ್ದೇಶದಿಂದ ಗಿಡಗಳನ್ನು ಉಡುಗೊರೆಯಾಗಿ ನೀಡಿ ವೈದ್ಯರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಪ್ರತಿಮ ಸಂತೋಷ ಮಾತನಾಡಿ ಹಗಲು- ರಾತ್ರಿ ಎನ್ನದೆ ರೋಗಿಗಳ ಆರೋಗ್ಯ ಕಾಪಾಡಲು ಮತ್ತು ಜೀವ ಉಳಿಸಲು ಶ್ರಮಿಸುವ ವೈದ್ಯರು ಸಮಾಜದ ನಿಜವಾದ ಸೇವಕರು. ಅದರ ಅಮೂಲ್ಯ ಸೇವೆಯ ಬಗ್ಗೆ ಮಕ್ಕಳಲ್ಲಿ ಗೌರವ ಕೃತಜ್ಞತೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ವೈದ್ಯರ ದಿನಾಚರಣೆಯನ್ನು ಆಸ್ಪತ್ರೆಗಳಿಗೆ ಭೇಟಿ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಮೌಲ್ಯ ಪವಿತ್ರ ಶ್ರೀಧರ್, ಆಶಿಕ ಮುರಳಿ, ಶಶಿಕಲಾ, ಮೇಘ ಸುಧೀರ್ ಸೇರಿದಂತೆ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!