
ಸಕಲೇಶಪುರ: ಪಟ್ಟಣದ ತೋಟಗಾರಿಕೆ ಇಲಾಖೆ ಕಚೇರಿ ಕಟ್ಟಡ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಕಚೇರಿ ಆರಂಭಕ್ಕೂ ಮುನ್ನವೇ ಕಟ್ಟಡ ಕುಸಿದಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ.ಭಾರೀ ಮಳೆ ಹಾಗೂ ಗಾಳಿಯಿಂದ ಕಟ್ಟಡ ಶಿಥಿಲಗೊಂಡಿತ್ತು. ತೋಟಗಾರಿಕೆ ಇಲಾಖೆ ಮುಂದೆ ಇರುವ ಟೀ ಕ್ಯಾಂಟೀನ್ ಆದಂ ಎಂಬುವವರು ಕಟ್ಟಡ ಕುಸಿಯುವ ಹಂತದಲ್ಲಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಅವರ ಎಚ್ಚರಿಕೆಯ ಮೇರೆಗೆ ಸಿಬ್ಬಂದಿ ಕಚೇರಿಯ ಕಡತಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದರು.ಭಾನುವಾರ ಮಧ್ಯರಾತ್ರಿ ಕಟ್ಟಡದ ಒಂದು ಭಾಗ ಕುಸಿದಿದ್ದು, ಸಿಬ್ಬಂದಿ ಎಚ್ಚರಗೊಂಡಿದ್ದರು. ನಂತರ ಇಂದು ಹಂತಹಂತವಾಗಿ ಸಂಪೂರ್ಣ ಕಟ್ಟಡ ಕುಸಿದು ಬಿದ್ದಿದೆ. ಅದೃಷ್ಟ ವಶಾತ್ ಯಾವುದೇ ಪ್ರಾಣ ಹಾನಿ ಹಾಗಿಲ್ಲ ಎಂದು ತಿಳಿದುಬಂದಿದೆ.
