ಲಯನ್ಸ್ ಸಂಸ್ಥೆ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ

ಲಯನ್ಸ್ ಸಂಸ್ಧೆ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ.

ಸಕಲೇಶಪುರ.ಪಟ್ಟಣದ ಹೊಸಬಸ್ ನಿಲ್ದಾಣದ ಹತ್ತಿರ ಹುತಾತ್ಮ ಯೋಧ ಎ.ಕೆ ಸಾಗರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಗಿಲ್ ಯುದ್ದದಲ್ಲಿ ಪ್ರಾಣ ತ್ಯಾಗ ಮಾಡಿದ ವೀರ ಯೋದರಿಗೆ ಶ್ರದ್ದಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಲಯನ್ಸ್ ಸಂಸ್ಧೆ ವಲಯಾಧ್ಯಕ್ಷೆ ಮೀನಾಕ್ಷಿ ಮಾತನಾಡಿ ಗಡಿದೇಶ ಪಾಕಿಸ್ಧಾನದ ನುಸುಳುಕೋರ ಸೈನಿಕರು ಕಾಶ್ಮೀರದ ಲಡಾಕ್ ಕಣಿವೆಯ ಎತ್ತರದ ಕಾರ್ಗಿಲ್ ಶಿಖರದ ಮೇಲೆ ಅತಿಕ್ರಮಣ ಮಾಡಿ ನೆಲಸಿದ್ದು ಅಂದಿನ ಪ್ರಧಾನಿ ದಿ.ಅಟಲ್ ಬಿಹಾರಿ ಅವರ ದಿಟ್ಟ ನಿಲುವಿನಿಂದಾಗಿ ನಮ್ಮ ಭಾರತದ ವೀರ ಯೋದರು ಪಾಕ್ ಸೈನಿಕರನ್ನು ದಮನ ಮಾಡಿ ನಮ್ಮ ಭೂಪ್ರದೇಶವನ್ನು ವಶಪಡಿಸಿದ ಸಂತಸದ ದಿನವಾದ ಜುಲೈ 26 ಕಾರ್ಗಿಲ್ ವಿಜಯೋತ್ಸವ ದಿನವಾಗಿ ಆಚರಿಸಲಾಗುತ್ತಿದೆ ಎಂದರು. ಲಯನ್ಸ್ ಸಂಸ್ಧೆ ಅಧ್ಯಕ್ಷ ವಿಶ್ವನಾಥ್ ಮಾತನಾಡಿ ಕೇವಲ ಸಾರ್ವಜನಿಕರ ಸೇವೆಯಲ್ಲದೇ ದೇಶ ಪ್ರೇಮ ಬೆಳಸುವ ನಿಟ್ಟಿನಲ್ಲೂ ಸಂಸ್ಧೆ ಕೆಲಸ ಮಾಡುತ್ತಿದೇ ಎಂದರು. ಈ ಸಂದರ್ಭದಲ್ಲಿ ಧರ್ಮಸ್ಧಳ ಜನಜಾಗೃತಿ ಟ್ರಸ್ಟಿನ ಹಾಸನ ಜಿಲ್ಲಾಧ್ಯಕ್ಷ ಮಾಜಿ ಪ್ರಾಂತೀಯ ಅಧ್ಯಕ್ಷ ಲ.ಡಾ.ನವೀನ್ ಚಂದ್ರ ಶೆಟ್ಟಿ,ನಿಕಟ ಪೂರ್ವ ಅಧ್ಯಕ್ಷ ಗಿರೀಶ್ ಕುಮಾರ್, ಕಾರ್ಯದರ್ಶಿ ಬಸವರಾಜ್,ಸಹ ಕಾರ್ಯದರ್ಶಿ ಜಯಶಂಕರ್,ಲಿಯೋ ಚಿರಾಗ್,ಗಿರೀಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!