ರೈತರು ಜಮೀನಿನಲ್ಲಿ ಕೆಲಸ ಮಾಡುವಾಗಲೇ ಬಂದ ಒಂಟಿಸಲಗ. ಕಾಡಾನೆ ಬಂದ ಕೂಡಲೇ ಓಡಿ ಹೋದ ರೈತರು

ಸಕಲೇಶಪುರ :ರೈತರು ಜಮೀನಿನಲ್ಲಿ ಕೆಲಸ ಮಾಡುವಾಗಲೇ ಒಂಟಿಸಲಗ ಬಂದಿದ್ದು ಕಾಡಾನೆ ಬಂದ ಕೂಡಲೇ ರೈತರು ಭಯಭೀತರಾಗಿ ಓಡಿ ಹೋದ ಘಟನೆ  ತಾಲ್ಲೂಕಿನ, ಬನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ. ರೈತರು ಭತ್ತ ಕಟಾವು ಮಾಡುತ್ತಿದ್ದ ವೇಳೆ ದೈತ್ಯಾಕಾರದ ಒಂಟಿಸಲಗ
ಏಕಾಏಕಿ ಬಂದಿದೆ.‌ ಕಾಡಾನೆ ಕಂಡ ರೈತರು ಕಟಾವು ನಿಲ್ಲಿಸಿ ಗಾಬರಿಯಿಂದ ಓಡಿದ್ದಾರೆ. ಕಾಡಾನೆ ನಿಧಾನವಾಗಿ ರೈತರ ಜಮೀನಿನಲ್ಲಿ ಸಾಗಿ ಕಾಫಿ ತೋಟದೊಳಗೆ ಹೋಗಿದೆ.‌ ಕಾಡಾನೆಯ ವಿಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.

Leave a Reply

Your email address will not be published. Required fields are marked *

error: Content is protected !!