ಹೊಸ ವರ್ಷ-ಕ್ರಿಸ್‌ಮಸ್‌ ರಜೆಗೆ ಯಶವಂತಪುರ-ವಯಾ ಹಾಸನ ಟು – ಕಾರವಾರ ನಡುವೆ 2 ಟ್ರಿಪ್ ವಿಶೇಷ ರೈಲು

ಬೆಂಗಳೂರು : ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಹೆಚ್ಚಿದ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು, ನೈಋತ್ಯ ರೈಲ್ವೆಯು ಮಹತ್ವದ ನಿರ್ಧಾರ ಕೈಗೊಂಡಿದೆ. ಬೆಂಗಳೂರು ವಯಾ ಹಾಸನ ಮಾರ್ಗವಾಗಿ ಯಶವಂತಪುರ ಮತ್ತು ಕಾರವಾರ ನಡುವೆ ಪ್ರತಿಯೊಂದು ದಿಕ್ಕಿನಲ್ಲಿ ಎರಡು ಟ್ರಿಪ್’ಗಳೊಂದಿಗೆ ವಿಶೇಷ ರೈಲುಗಳನ್ನು ಕಾರ್ಯಾಚರಣೆ ಮಾಡಲಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಈ ಮೂಲಕ ಕರಾವಳಿ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ರೈಲುಗಳ ಸಂಚಾರ ಮತ್ತು ವೇಳಾಪಟ್ಟಿ :
ರೈಲು ಸಂಖ್ಯೆ 06267 ಯಶವಂತಪುರ – ಕಾರವಾರ ವಿಶೇಷ ಎಕ್ಸ್‌ಪ್ರೆಸ್‌ ರೈಲು ಡಿಸೆಂಬರ್ 24 ಮತ್ತು 27 ರಂದು ಮಧ್ಯಾಹ್ನ 12 ಗಂಟೆಗೆ ಯಶವಂತಪುರದಿಂದ ಹೊರಟು, ಮರುದಿನ ಬೆಳಿಗ್ಗೆ 6.10 ಗಂಟೆಗೆ ಕಾರವಾರವನ್ನು ತಲುಪಲಿದೆ.
ರೈಲು ಸಂಖ್ಯೆ 06268 ಕಾರವಾರ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್‌ ರೈಲು ಡಿಸೆಂಬರ್ 25 ಮತ್ತು 28 ರಂದು ಮಧ್ಯಾಹ್ನ 12 ಗಂಟೆಗೆ ಕಾರವಾರದಿಂದ ಹೊರಟು, ಮರುದಿನ ಬೆಳಗಿನ ಜಾವ 4.30 ಗಂಟೆಗೆ ಯಶವಂತಪುರವನ್ನು ತಲುಪಲಿದೆ.

ನಿಲುಗಡೆಗಳು
ಈ ವಿಶೇಷ ರೈಲುಗಳು ಮಾರ್ಗಮಧ್ಯೆ ಈ ಕೆಳಗಿನ ಪ್ರಮುಖ ನಿಲ್ದಾಣಗಳಲ್ಲಿ ನಿಲ್ಲಲಿವೆ:
• ಚಿಕ್ಕಬಾಣಾವರ
• ಕುಣಿಗಲ್
• ಚನ್ನರಾಯಪಟ್ಟಣ
• ಹಾಸನ
• ಸಕಲೇಶಪುರ
• ಸುಬ್ರಹ್ಮಣ್ಯ ರೋಡ್
• ಕಬಕಪುತ್ತೂರು
• ಬಂಟವಾಳ
• ಸುರತ್ಕಲ್
• ಮುಲ್ಕಿ
• ಉಡುಪಿ
• ಬಾರ್ಕೂರು
• ಕುಂದಾಪುರ
• ಬೈಂದೂರು
• ಭಟ್ಕಳ
• ಮುರ್ಡೇಶ್ವರ
• ಹೊನ್ನಾವರ
• ಕುಮಟಾ
• ಗೋಕರ್ಣ ರೋಡ್
• ಅಂಕೋಲಾ
💺 ಬೋಗಿಗಳ ವಿವರ
ಪ್ರಯಾಣಿಕರ ಅನುಕೂಲಕ್ಕಾಗಿ ಈ ವಿಶೇಷ ರೈಲು ಕೆಳಗಿನ ಬೋಗಿ ಸಂಯೋಜನೆಯೊಂದಿಗೆ ಕಾರ್ಯನಿರ್ವಹಿಸಲಿದೆ:
• ಎಸಿ 2 – ಟೈರ್: 1 ಬೋಗಿ
• ಎಸಿ 3-ಟೈರ್: 3 ಬೋಗಿಗಳು
• ಸ್ಲೀಪರ್ ಕ್ಲಾಸ್: 12 ಬೋಗಿಗಳು
• ಸಾಮಾನ್ಯ ದ್ವಿತೀಯ ದರ್ಜೆ: 3 ಬೋಗಿಗಳು
• ದ್ವಿತೀಯ ದರ್ಜೆ – ಕಮ್ – ಲಗೇಜ್ ಬ್ರೇಕ್ ವ್ಯಾನ್/ವಿಕಲಚೇತನರ ಸಂಯೋಜನೆ: 2 ಬೋಗಿಗಳು
ರಜಾದಿನಗಳ ಪ್ರಯಾಣವನ್ನು ಯೋಜಿಸುವ ಪ್ರಯಾಣಿಕರು ಈ ವಿಶೇಷ ರೈಲಿನ ಸೇವೆಗಳನ್ನು ಬಳಸಿಕೊಳ್ಳಲು ರೈಲ್ವೆ ಇಲಾಖೆ ಕೋರಿದೆ.

Leave a Reply

Your email address will not be published. Required fields are marked *

error: Content is protected !!