
ಸಕಲೇಶಪುರ: ಪಟ್ಟಣದಲ್ಲಿ ಅವಶ್ಯಕತೆ ಇರುವ ಕಡೆ, ಹಾಲಿ ಇರುವ ಅಲುಮಿನಿಯಂ ವಾಹಕವನ್ನು ಹೊಸ ಎಬಿ ಕೇಬಲ್ ನಿಂದ ಬದಲಾಯಿಸುವ ಕಾಮಗಾರಿಯೂ ಈಗಾಗಲೇ ಅನುಮೋದನೆಗೊಂಡಿರುವುದರಿಂದ ದಿನಾಂಕ: 10.12.2025 ರಂದು ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ ಕಾಮಗಾರಿ ಮುಗಿಯುವವರೆಗೂ, ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯವಾಗುತ್ತದೆಂದು ಹಾಗೂ ಸಾರ್ವಜನಿಕರು ಸಹಕರಿಸಬೇಕಾಗಿ ಈ ಮೂಲಕ ಕೋರಲಾಗಿದೆ.
1. ಭುವನೇಶ್ವರಿ ರಸ್ತೆ
2. ಹೇಮಾವತಿ ಕಾಂಪ್ಲೆಕ್ಸ್ ಕಟ್ಟಡ
3. ತಾಲೂಕು ದಂಡಾಧಿಕಾರಿಗಳ ಕಚೇರಿ
4. ಪುರಸಭೆ ಕಚೇರಿ
5. ತಾಲೂಕು ಪಂಚಾಯಿತಿ ಕಚೇರಿ
6. ಎಸ್‌ಬಿಐ ಕೆನರಾ ಹೆಚ್‌ಡಿಎಫ್ಸಿ ಬ್ಯಾಂಕ್ ಗಳ ಕಟ್ಟಡ
7. ಮಖಾನ್ ರಸ್ತೆ
8. ಎಪಿಎಂಸಿ ಹಾಗೂ ಬಿಎಸ್ಎನ್ಎಲ್ ಕಚೇರಿ ಆವರಣ
ಈ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದೆ.
