ಧರ್ಮಸ್ಥಳ, ಕುಕ್ಕೆ- ಶ್ರವಣಬೆಳಗೊಳಕ್ಕೆ ಹೋಗುವವರಿಗೆ ಸಿಹಿಸುದ್ದಿ: ಮತ್ತೆ ಶುರುವಾಯ್ತು ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು

ಬೆಂಗಳೂರು:ಬೆಂಗಳೂರಿನಿಂದ ಕರಾವಳಿಗೆ ಹೋಗುವ ರೈಲ್ವೇ ಪ್ರಯಾಣಿಕರಿಗೆ ಸಿಹಿಸುದ್ದಿಯೊಂದನ್ನು ನೈಋತ್ಯ ರೈಲ್ವೆ ಇಲಾಖೆ ನೀಡಿದೆ. ಹಾಗೂ ಇದು ಧರ್ಮಸ್ಥಳ, ಕುಕ್ಕೆ- ಶ್ರವಣಬೆಳಗೊಳ ಸೇರಿದಂತೆ ಹಲವು ಪುಣ್ಯ  ಕ್ಷೇತ್ರಕ್ಕೆ  ಹೋಗುವವರಿಗೆ ಇದು ಸಹಾಯವಾಗಲಿದೆ. ಆರು ತಿಂಗಳ ಹಿಂದೆ ರದ್ದಾಗಿದ್ದ ಬೆಂಗಳೂರು-ಮಂಗಳೂರು-ಕಾರವಾರ ರೈಲು ಸೇವೆ ಪುನಾರಂಭಗೊಳಿಸಲು ನಿರ್ಧರಿಸಲಾಗಿದೆ. ಇದೀಗ ಈ ಬಗ್ಗೆ ರೈಲ್ವೆ ಇಲಾಖೆ ಅಧಿಕೃತ ಮಾಹಿತಿ ನೀಡಿದೆ. ಬೆಂಗಳೂರು-ಮಂಗಳೂರು-ಕಾರವಾರ ರೈಲು ಸೇವೆಯಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಈ ಮೂಲಕ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು (16575/16576) (Gommateshwara Express) ಮತ್ತೆ ತನ್ನ ಸೇವೆ ಮುಂದುವರಿಸಲಿದೆ. ಇದೀಗ ಮೊದಲಿನಂತೆ ತನ್ನ ಸಂಚಾರವನ್ನು ಯಶವಂತಪುರ ನಿಲ್ದಾಣದಿಂದ ಆರಂಭಿಸಲಿದೆ. ಪ್ರಯಾಣಿಕರು ಈ ರೈಲ್ವೆ ಸಂಚಾರ ಸೇವೆಯನ್ನು ಸದುಪಯೋಗ ಮಾಡಿಕೊಳ್ಳುವಂತೆ ರೈಲ್ವೆ ಇಲಾಖೆ ಹೇಳಿದೆ.

ಕಳೆದ ಆರು ತಿಂಗಳಿನಿಂದ ರದ್ದಾಗಿದ್ದ ಈ ರೈಲು, ಇದೀಗ ಮತ್ತೆ ಪ್ರಾರಂಭವಾಗಿರುವುದು ಪ್ರಯಾಣಿಕರಲ್ಲಿ ಸಂತಸ ತಂದಿದೆ. ಹಾಸನ, ಸಕಲೇಶಪುರ ಮಾರ್ಗದಲ್ಲಿ ವಿದ್ಯುದೀಕರಣ ಮತ್ತು ಇತರ ಕಾಮಗಾರಿಗಳ ಕಾರಣದಿಂದಾಗಿ ಈ ರೈಲು ರದ್ದಾಗಿತ್ತು. ಇದೀಗ ಮತ್ತೆ ಸಂಚಾರಿಸುವ ಮೂಲಕ ಪ್ರಯಾಣಿಕರಿಗೆ ಸೇವೆ ನೀಡಲು ಸಿದ್ಧವಾಗಿದೆ. ಈ ಮೂಲಕ ನೈಋತ್ಯ ರೈಲ್ವೆ ಕರಾವಳಿ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ.

ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಹತ್ವದ ಸುಧಾರಣೆ:

ರೈಲಿ ಇಲಾಖೆಯಲ್ಲಿ ಇದೊಂದು ದೊಡ್ಡ ಮೈಲಿಗಲ್ಲು ಎಂದು ಹೇಳಬಹುದು. ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲಿನಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಇನ್ನು ಈ ರೈಲು ಬೆಳಗ್ಗಿನ ಹೊತ್ತು ಸಂಚರಿಸುವ ಕಾರಣ, ಪ್ರಯಾಣಿಕರು ಪ್ರಕೃತಿಯನ್ನು ವೀಕ್ಷಿಸಲು ವಿಸ್ಟಾಡೋಮ್ ಕೋಚ್, ಗಾಜಿನ ಕಿಟಿಕಿ, ಬೃಹತ್ ಗಾಜಿನ ಮೇಲ್ಚಾವಣೆ, ವ್ಯವಸ್ಥಿತ ಆಸನಗಳನ್ನು ಮಾಡಲಾಗಿದೆ. ಹಾಗಾಗಿ ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ , ಮಂಗಳೂರು ಮಾರ್ಗದುದ್ದಕ್ಕೂ ಪ್ರಕೃತಿಯನ್ನು ನೋಡಿಕೊಂಡು ಹೋಗಬಹುದು. ಇಷ್ಟು ದಿನ ಈ ಪ್ರಯಾಣಿಕರು ಇದನ್ನು ಮಿಸ್ ಮಾಡಿಕೊಂಡಿದ್ದರು. ಇದೀಗ ಮತ್ತೆ ತನ್ನ ಸಂಚಾರವನ್ನು ಮುಂದುವರಿಸುವುದರಿಂದ ಪ್ರಯಾಣಿಕರಿಗೆ ಮತ್ತೆ ಸಂತಸ ತಂದಿದೆ.

Leave a Reply

Your email address will not be published. Required fields are marked *

error: Content is protected !!