
ಸಕಲೇಶಪುರ :- ನಾಳೆ ದಿನಾಂಕ 23.12.2025ನೇ ಮಂಗಳವಾರ ಸಕಲೇಶಪುರ ಜನ ಮೆಚ್ಚಿದ ಶಾಸಕರು ಹಾಗೂ ಬಿಜೆಪಿ ರಾಜ್ಯ ಎಸ್. ಸಿ ಮೋರ್ಚಾ ಅಧ್ಯಕ್ಷರಾದ ಶ್ರೀ ಸಿಮೆಂಟ್ ಮಂಜು ಅವರ ಹುಟ್ಟುಹಬ್ಬದ ಅಂಗವಾಗಿ ಸಕಲೇಶಪುರದ ಶ್ರೀ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (HIMS ) ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದೆ.
ಇದರಲ್ಲಿ ನುರಿತ ವೈದ್ಯರು ಆಗಮಿಸಿ ಸಾರ್ವಜನಿಕರಿಗೆ ಉಚಿತವಾಗಿ ವೈದ್ಯಕೀಯ ಪರೀಕ್ಷೆ ನಡೆಸಿ ಸಂಬಂಧ ಪಟ್ಟ ಅನಾರೋಗ್ಯಕ್ಕೆ ಸ್ಥಳದಲ್ಲೇ ಉಚಿತ ಓಷಧಿ ನೀಡಲಿದ್ದಾರೆ.
ಇದರಲ್ಲಿ ಫಿಷಿಶಿಯನ್, ಮಕ್ಕಳ ತಜ್ಞರು, ಸ್ತ್ರೀ ರೋಗ ತಜ್ಞರು ( gynecologist), ಮೂಳೆ ಕೀಲು ತಜ್ಞರು, ಚರ್ಮ ರೋಗ, ದಂತ(ಹಲ್ಲು ), ಕಿವಿ ಮೂಗು ಗಂಟಲು (ENT ). ಕಣ್ಣಿನ,ಮನೋವೈದ್ಯರು ( psychiatrist )ಹಾಗು ಸರ್ಜರಿ ವೈದ್ಯರು ಶಿಬಿರದಲ್ಲಿದ್ದು ತಪಾಸಾಣೆ ನಡೆಸಲಿದ್ದಾರೆ.
ಶಾಸಕರಾದ ಸಿಮೆಂಟ್ ಮಂಜು ಅವರ ಹುಟ್ಟು ಹಬ್ಬದ ಪ್ರಯುಕ್ತ ಹಮ್ಮಿಕೊಂಡಿರುವ ಈ ಆರೋಗ್ಯ ಶಿಬಿರದ ಕಾರ್ಯಕ್ರಮ ದಲ್ಲಿ ತಾವುಗಳು ಕೂಡ ಭಾಗವಹಿಸುವ ಮೂಲಕ ಮತ್ತು ತಮ್ಮ ಊರಿನ ಅಕ್ಕಪಕ್ಕದ ಮನೆಯವರು ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಅವರಿಗೆ ಈ ಉಚಿತ ಅರೋಗ್ಯ ಶಿಬಿರದ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿ.
ಕಾಮನಹಳ್ಳಿ ತೀರ್ಥಾನಂದ (ಕೀರ್ತಿ )
ಬಿಜೆಪಿ ಮುಖಂಡರು.
ಸಕಲೇಶಪುರ
