ವಿಜಯ ಕರ್ನಾಟಕ ರಕ್ಷಣಾ ವೇದಿಕೆ (ರಿ) ವತಿಯಿಂದ ಕೆ ಎಸ್ ಆರ್ ಟಿ ಸಿ ಸೂಚನಾ ಫಲಕ ಅನಾವರಣ

ಸಕಲೇಶಪುರ: ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ  ಕೆ ಎಸ್ ಆರ್ ಟಿ ಸಿ ಚಿಕ್ಕಮಂಗಳೂರು ಘಟಕಕ್ಕೆ ವಿಜಯ ಕರ್ನಾಟಕ ರಕ್ಷಣಾ ವೇದಿಕೆ (ರಿ ) ವತಿಯಿಂದ ವತಿಯಿಂದ ಸೂಚನಾ ಫಲಕವನ್ನು ಕೊಡುಗೆಯಾಗಿ ನೀಡಿ ಅನಾವರಣ ಮಾಡಲಾಯಿತು.

ಹಾಸನ ಮಾರ್ಗವಾಗಿ ಸಕಲೇಶಪುರಕ್ಕೆ ಬರುವ ಕೆ ಎಸ್ ಆರ್ ಟಿ ಸಿ ಬಸ್ ಳನ್ನು ಹೊರತುಪಡಿಸಿ ಇತರೆ ಖಾಸಗಿ ವಾಹನಗಳ ನಿಷೇಧ, ಹಾಗೂ ಕೆ ಎಸ್ ಆರ್ ಟಿ ಸಿ ಎಲ್ಲಾ ಬಸ್ಸುಗಳು ಹಳೆ ಬಸ್ ಸ್ಟ್ಯಾಂಡ್ ಒಳಗಡೆ ಪ್ರವೇಶ ಮಾಡುವಂತೆ  ಸೂಚನೆ ಇರುವ ನಾಮಫಲಕವನ್ನು ಕೊಡುಗೆಯಾಗಿ ನೀಡಿ ಹಳೆ ಬಸ್ ನಿಲ್ದಾಣದಲ್ಲಿ ನಾಮಫಲಕವನ್ನು ನಿಲ್ಲಿಸಿ ಅನಾವರಣ ಮಾಡಲಾಯಿತು, ಈ ಸಂದರ್ಭದಲ್ಲಿ ತಾಲೂಕು ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ನಾಗರಾಜ್, ಜಿಲ್ಲಾ ಅಧ್ಯಕ್ಷರಾದ ಎಸ್ ಎಲ್ ಗೀತಾ, ತಾಲೂಕು ಉಪಾಧ್ಯಕ್ಷರಾದ ಗುರುಪ್ರಕಾಶ್ ಡಿ ಎನ್,  ಕಾರ್ಯದರ್ಶಿ ಗಣೇಶ್, ಸಂಚಾಲಕರಾದ ಶಿವಣ್ಣ, ಕಾನೂನು ಸಲಹೆಗಾರರಾದ ಅಭಿದ್ಯಾನ್, ಸಂಘದ ಗೌರವ ಅಧ್ಯಕ್ಷರು ಹಾಗೂ ಯೋಗ ಚೇತನ ಟ್ರಸ್ಟ್ ಅಧ್ಯಕ್ಷರಾದ ಲಕ್ಷ್ಮಿ ರಂಗನಾಥ್ ಶೆಟ್ರು, ನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್, ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!