ಸಕಲೇಶಪುರ ಪಟ್ಟಣದ ಕೆಲವು ಕಡೆ ಮಂಗಳವಾರ ವಿದ್ಯುತ್ ವ್ಯತ್ಯಯ

ಇದು ಕೆಇಬಿ ಇಲಾಖೆ ಸಕಲೇಶಪುರ, ಸಾರ್ವಜನಿಕ ಪ್ರಕಟಣೆ :


ಸಕಲೇಶಪುರ ಪಟ್ಟಣದಲ್ಲಿ ಅವಶ್ಯಕತೆ ಇರುವ ಕಡೆ, ಹಾಲಿ ಇರುವ ಅಲುಮಿನಿಯಂ ವಾಹಕವನ್ನು ಹೊಸ ಎಬಿ ಕೇಬಲ್ ನಿಂದ ಬದಲಾಯಿಸುವ ಕಾಮಗಾರಿಯೂ ಈಗಾಗಲೇ ಅನುಮೋದನೆಗೊಂಡಿರುವುದರಿಂದ ದಿನಾಂಕ 13.01.2026 ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ ಕಾಮಗಾರಿ ಮುಗಿಯುವವರೆಗೂ,  ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯವಾಗುತ್ತದೆಂದು ಹಾಗೂ ಸಾರ್ವಜನಿಕರು ಸಹಕರಿಸಬೇಕಾಗಿ ಈ ಮೂಲಕ ಕೋರಲಾಗಿದೆ.
1. ಚಂಪಕನಗರದ ಫಿಲ್ಟರ್ ಹೌಸ್
2. ಹೆನ್ನಲಿ ರಸ್ತೆ ಪಂಪ ಹೌಸ್ / ಜಾಕ್ ವೆಲ್
3. ಮಲ್ಲಮ್ಮನ ಬೀದಿ
4. ಷಣ್ಮುಗಯ್ಯನ ಬೀದಿ
5. ಆಜಾದ್ ರಸ್ತೆಯ ಉಲ್ಲಾಸ್ ಚಿಕನ್ ಶಾಪ್ ನಿಂದ ಮೇನಕ ಹೋಟೆಲ್ ಕಟ್ಟಡದ ವರೆಗಿನ ಎಡ ಭಾಗ ಹಾಗೂ ಬಲ ಭಾಗ
6. ಬಿ ಎಂ ರಸ್ತೆಯ ಸಾಯಿ ಬೇಕರಿ ಕಟ್ಟಡದಿಂದ ಸೇತುವೆ ವರೆಗಿನ ಭಾಗ
7. ತೇಜಸ್ವಿ ಚಿತ್ರಮಂದಿರ ಹಾಗೂ ಕಾಂಪ್ಲೆಕ್ಸ್ ಕಟ್ಟಡ ಇಂದ ಆಚಂಗಿ ಹಾಗೂ ಕುಡುಗರಹಳ್ಳಿ ಗ್ರಾಮ ಒಳಗೊಂಡಂತೆ ಆಚಂಗಿ ರೈಲ್ವೆ ಸೇತುವೆ ವರೆಗಿನ ಎಡಭಾಗ ಹಾಗೂ ಬಲ ಭಾಗ (ಅರೇಹಳ್ಳಿ ರಸ್ತೆ)
8. ಶ್ರೀನಿವಾಸ ಕಲ್ಯಾಣ ಮಂಟಪ ಹಾಗೂ ಸಾಮಿಲ್
9. ಚಿಕ್ಕಪುರ ಗ್ರಾಮ
10. ರೈಲ್ವೆ ಸ್ಟೇಷನ್ ಹೆಬ್ಸಾಲೆ ಸುತ್ತಮುತ್ತಲ ಪ್ರದೇಶ
11. ಆಜಾದ್ ರಸ್ತೆ ಲೇಔಟ್
12. ಜನ್ನಾಪುರ ಫ್ಲೈ ವುಡ್ ಫ್ಯಾಕ್ಟರಿ
ಈ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದೆ.

Leave a Reply

Your email address will not be published. Required fields are marked *

error: Content is protected !!