ನಾಳೆಯಿಂದ ದೊಡ್ಡನಹಳ್ಳಿಯ ಶ್ರೀ ಚೌಡೇಶ್ವರಿ ಅಮ್ಮನವರ 6ನೇ ವರ್ಷದ ಜಾತ್ರಾ ಮಹೋತ್ಸವ

ನಾಳೆಯಿಂದ ದೊಡ್ಡನಹಳ್ಳಿಯ ಶ್ರೀ ಚೌಡೇಶ್ವರಿ ಅಮ್ಮನವರ 6ನೇ ವರ್ಷದ  ಜಾತ್ರಾ ಮಹೋತ್ಸವ.

ಸಕಲೇಶಪುರ :- ತಾಲ್ಲೂಕಿನ ದೊಡ್ಡನಹಳ್ಳಿ ಗ್ರಾಮದ ಶ್ರೀ ಚೌಡೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ 6ನೇ ವರ್ಷದ ಜಾತ್ರಾ ಮಹೋತ್ಸವವನ್ನು ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಜಾತ್ರಾ ಮಹೋತ್ಸವವು ದಿನಾಂಕ 25-01-2026 ಭಾನುವಾರ ಸಂಜೆ 6 ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರಂಭವಾಗಲಿದೆ. ಮೊದಲ ದಿನ ವಿಶೇಷ ಪೂಜೆ, ಕಳಸ ಪ್ರತಿಷ್ಠೆ ಹಾಗೂ ರಥೋತ್ಸವ ಹಾಗೂ  ಅನ್ನ ಸಂತರ್ಪಣೆ ನಡೆಯಲಿದೆ.


26-01-2026 ಸೋಮವಾರ ಬೆಳಿಗ್ಗೆ 7 ಗಂಟೆಗೆ ಕಳಸಾಭಿಷೇಕ, ಹೋಮ–ಹವನ, ಮಹಾ ಮಂಗಳಾರತಿ ಹಾಗೂ ಬಳಿಕ ಭಕ್ತರಿಗೆ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 

ದಿನಾಂಕ:- 27-01-2026 ಮಂಗಳವಾರ ಬೆಳಿಗ್ಗೆ  ಬಲಿ ಪೂಜೆ, ಶ್ರೀ ಚೌಡೇಶ್ವರಿ ಅಮ್ಮನವರಿಗೆ ಪುಷ್ಪಾಲಂಕಾರದೊಂದಿಗೆ ಮಹಾಮಂಗಳಾರತಿ, ನೈವೇದ್ಯ ಸಮರ್ಪಣೆ, ನಂತರ  ಅನ್ನ ಸಂತರ್ಪಣೆ ನೆಡೆಯಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ದಿನಾಂಕ 19-01.2026 ಸೋಮವಾರದಿಂದ ದಿನಾಂಕ 5.2.2026ನೇ ಗುರುವಾರದವರೆಗೆ ಕಡ್ಡಾಯವಾಗಿ ಬಲಿ ಪೂಜೆಯನ್ನು ನಿಷೇಧಿಸಲಾಗಿದೆ.

ಈ ಜಾತ್ರಾ ಮಹೋತ್ಸವಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ಚೌಡೇಶ್ವರಿ ಅಮ್ಮನವರ ಆಶೀರ್ವಾದ ಪಡೆಯುವಂತೆ ಜಾತ್ರಾ ಸಮಿತಿ ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!