
ಇದು ಕೆಇ ಬಿ ಇಲಾಖೆ, ಸಕಲೇಶಪುರ,
ಸಾರ್ವಜನಿಕ ಪ್ರಕಟಣೆ :
ಸಕಲೇಶಪುರ :ದಿನಾಂಕ: 25.01.2026 ರ ಭಾನುವಾರದಂದು ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ವಿವಿ ಕೇಂದ್ರದ ಸಮೀಪ ಕೇಬಲ್ ಕಾಮಗಾರಿಯನ್ನು ಸಹ ಹಮ್ಮಿಕೊಂಡಿದ್ದು, ಸದರಿ ಕಾಮಗಾರಿಯು ಸಹ ಅಂತಿಮ ಹಂತದಲ್ಲಿರುತ್ತದೆ. ಆದುದರಿಂದ ಆ ದಿನ ಬೆಳಿಗ್ಗೆ 9:00 ಯಿಂದ ಸಂಜೆ ಕಾಮಗಾರಿ ಮುಗಿಯುವ ವರೆಗೂ ಸಕಲೇಶಪುರ ನಗರ, ಸಕಲೇಶಪುರ ಕುಡಿಯುವ ನೀರಿನ ಮಾರ್ಗ, ಹಾರ್ಲೆ, ಶುಕ್ರವಾರ ಸಂತೆ, ಮಳಲಿ, ಆನೆ ಮಹಲ್, ಉದಯವಾರ ಹಾಗೂ ಬೆಳಗೋಡು ಗ್ರಾಮಗಳ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗುಲಿದೆ. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಸಹಾಯಕ ಇಂಜಿನಿಯರ್ ನಿರಂಜನ್ ಕೆ.ಆರ್. ತಿಳಿಸಿದ್ದಾರೆ.
