ಸುಳ್ಳು ಆರೋಪಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ. ಮುರುಳಿ ಮೋಹನ್  ದೂರು

ಸುಳ್ಳು ಆರೋಪಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ – ನಗರ ಪೊಲೀಸ್ ಠಾಣೆಗೆ ದೂರು

ಸಕಲೇಶಪುರ:
ತನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿಸಿ ಸಾರ್ವಜನಿಕವಾಗಿ ಅಪಪ್ರಚಾರ ನಡೆಸಲಾಗಿದೆ ಎಂದು ಆರೋಪಿಸಿ  ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪಟ್ಟಣದ ಲಕ್ಷ್ಮೀಪುರಂ ಬಡಾವಣೆಯ ನಿವಾಸಿ ಮುರಳಿ ಮೋಹನ್ ಅವರು ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಜನವರಿ 23 ರಂದು ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಪ್ರೆಸ್ ಮೀಟ್‌ನಲ್ಲಿ ರತನ್ ಸದಾಶಿವ, ಕೃಷ್ಣಮೂರ್ತಿ, ರುದ್ರಪ್ಪ ಎಂಬವರುಗಳು ತನ್ನ ಮೇಲೆ ಆಧಾರ ರಹಿತ ಹಾಗೂ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರೆಸ್ ಮೀಟ್‌ನ ವಿಡಿಯೋದಲ್ಲಿ “ಸಕಲೇಶಪುರದ ಮುರಳಿ ಮೋಹನ್ ಮತ್ತು ಅವರ ಸಹಚರರು ಎರಡು ಕೊಲೆಗಳನ್ನು ಮಾಡಿ ಚಾರ್ಮುಡಿ ಘಾಟ್‌ನಲ್ಲಿ ಎಸೆದಿದ್ದಾರೆ” ಎಂಬ ಹೇಳಿಕೆ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಯಾವುದೇ ಸ್ಪಷ್ಟ ಮಾಹಿತಿ ಇಲ್ಲದೆ ನನ್ನ ಮೇಲೆ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಇದರಿಂದ ನನ್ನ ಮಾನಹಾನಿ ಹಾಗೂ ತೇಜೋವಧೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆರೋಪಿತ ವ್ಯಕ್ತಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ತನಗೆ ನ್ಯಾಯ ಒದಗಿಸಬೇಕು ಎಂದು ಮುರಳಿ ಮೋಹನ್ ಅವರು ನಗರ ಪೊಲೀಸ್ ನಿರೀಕ್ಷಕರ ವನರಾಜ್ ರವರಿಗೆ ಮನವಿ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!