‘ವಂದೇ ಮಾತರಂ’ಗೆ 150 ವರ್ಷ. ರೋಟರಿ ಆಂಗ್ಲ ಶಾಲೆಯ ಸಾವಿರಾರು ವಿದ್ಯಾರ್ಥಿಗಳಿಂದ ಗಾಯನ

‘ವಂದೇ ಮಾತರಂ’ಗೆ 150ನೇ ವರ್ಷದ ಸಂಭ್ರಮ

ಸಕಲೇಶಪುರ :ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಫೂರ್ತಿ ನೀಡಿದ ಬಂಕಿಮ್ ಚಂದ್ರ ಚಟರ್ಜಿ ಬರೆದಿರುವ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ರಚನೆಯಾಗಿ 150 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ, ಗಣರಾಜ್ಯೋತ್ಸವ ಸಂದರ್ಭದಲ್ಲಿ ರೋಟರಿ ಇಂಗ್ಲಿಷ್  ಶಾಲೆಯಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 80 ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಮತ್ತು ಎಲ್ಲಾ ಆಡಳಿತ ಮಂಡಳಿಯ ಸದಸ್ಯರು ಒಟ್ಟಾಗಿ ಸೇರಿ ವಂದೇ ಮಾತರಂ ಗೀತೆಯನ್ನು ಹಾಡುವ ಮುಖಾಂತರ ರಾಷ್ಟ್ರೀಯ ಗೀತೆಗೆ ಗೌರವ ಸಮರ್ಪಿಸಲಾಯಿತು. ಇದು ದೇಶಭಕ್ತಿಯ ಶಕ್ತಿ ಮತ್ತು ಪ್ರೇರಣೆಯ ಸಂಕೇತವಾಗಿದೆ” ಎಂದು ಸಂಸ್ಥೆಯ ಕಾರ್ಯದರ್ಶಿ ಅರುಣ್  ರಕ್ಷಿದಿಯವರು ಹೇಳಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಚಿಹ್ನೆಗಳು, ದೇಶದ ವಿವಿಧ ರಾಜ್ಯಗಳ ಉಡುಪು ತೊಟ್ಟು ವಿವಿಧತೆಯಲ್ಲಿ ಏಕತೆಯ ಸಂದೇಶವನ್ನು ಸಾರಿದರು.
ಈ ಸಂದರ್ಭದಲ್ಲಿ ರೋಟರಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ.ಜಿ. ಚಂದ್ರಶೇಖರ್,  ಉಪಾಧ್ಯಕ್ಷ ಸಹನಾ ಶಸಿಧರ್, ಕಾರ್ಯದರ್ಶಿ ಎಂಡಿ ವಿಜೇತ್ ರೋಟರಿ ಅಧ್ಯಕ್ಷ ಎಂ. ಸಿ. ಸ್ವಾಮಿ, ಕಾರ್ಯದರ್ಶಿ ರವಿ ಕುಮಾರ್, ವಾಸುದೇವ ಶರ್ಮ, ಪ್ರದೀಪ್, ಪ್ರಾಂಶುಪಾಲರಾದ ಸುಮಂತ್ ಭಾರ್ಗವ್,ಮುಖ್ಯ ಶಿಕ್ಷಕ ಎಂ.ಡಿ. ರುದ್ರೇಶ್, ಮುಖ್ಯ ಶಿಕ್ಷಕಿ ಬಿ.ಡಿ. ರತ್ನ ಹಾಗೂ ಶಿಕ್ಷಕ ವೃಂದದವರು  ಇದ್ದರು.

Leave a Reply

Your email address will not be published. Required fields are marked *

error: Content is protected !!