
ಸಕಲೇಶಪುರ : ಶ್ರೀ ಸಕಲೇಶ್ವರ ಸ್ವಾಮಿಯ ದಿವ್ಯ ಬ್ರಹ್ಮರಥೋತ್ಸವ ಹಾಗೂ ಜಾತ್ರಾ ಮಹೋತ್ಸವದ ಪ್ರಯುಕ್ತ, ಶ್ರೀ ಮುರಳಿ ಮೋಹನ್ ಯುವ ಬ್ರಿಗೇಡ್ (ರಿ) ಹೆಮ್ಮೆಯಿಂದ ಅರ್ಪಿಸುವ ವಿಶೇಷ ಕಾರ್ಯಕ್ರಮ – “ಸಕಲೇಶಪುರ ಹಬ್ಬ 2026”.
ಈ ಸಂಭ್ರಮವನ್ನು ಇಮ್ಮಡಿಗೊಳಿಸಲು ಬೆಂಗಳೂರಿನ ಸ್ಫೂರ್ತಿ ಇವೆಂಟ್ಸ್ ನಡೆಸಿಕೊಡುವ ಅದ್ಭುತ “ಮ್ಯೂಸಿಕಲ್ ನೈಟ್” ಆಯೋಜಿಸಲಾಗಿದೆ.
ಜೀ ಕನ್ನಡದ ಜನಪ್ರಿಯ ಸರಿಗಮಪ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (DKD) ಖ್ಯಾತಿಯ ಕಲಾವಿದರಾದ ಅಶ್ವಿನ್ ಶರ್ಮಾ, ಜ್ಞಾನ, ಹರೀಶ್, ಮಹೇಶ್, ರಮೇಶ್ ಬಾಬು, ಹಾಗೂ ನಿರೂಪಕಿ ಹರ್ಷಿತಾ ಇವರು ರಂಜಿಸಲು ಬರುತ್ತಿದ್ದಾರೆ.
ಬನ್ನಿ, ರಥೋತ್ಸವದ ಪುಣ್ಯದ ಜೊತೆಗೆ ಸಂಗೀತದ ಸವಿಯನ್ನು ಸವಿಯೋಣ.
ದಿನಾಂಕ: 02-02-2026, ಸೋಮವಾರ
ಸಮಯ: ಸಂಜೆ 7 ಗಂಟೆಗೆ
ಸ್ಥಳ: ಹೇಮಾವತಿ ಪ್ರತಿಮೆ ಮುಂಭಾಗ, ಸಕಲೇಶಪುರ
ಎಲ್ಲರಿಗೂ ಆದರದ ಸ್ವಾಗತ,- ಶ್ರೀ ಮುರಳಿ ಮೋಹನ್ ಯುವ ಬ್ರಿಗೇಡ್ (ರಿ)
