

ಬಾಗೆ ಗ್ರಾಮ ಪಂಚಾಯಿತಿಯಲ್ಲಿ ಸಂಜೀವಿನಿ ಶೆಡ್ ಶಾಸಕ ಸಿಮೆಂಟ್ ಮಂಜು ಅವರಿಂದ ಉದ್ಘಾಟನೆ
ಸಕಲೇಶಪುರ ತಾಲೂಕಿನ ಬಾಗೆ ಗ್ರಾಮ ಪಂಚಾಯಿತಿಯಲ್ಲಿ ಸಂಜೀವಿನಿ ಶೆಡ್ ಬಾಗೆ ಶಾಲೆಯ ಹೈಟೆಕ್ ಶೌಚಾಲಯ ಮತ್ತು ಬೀದಿ ದೀಪ ಉದ್ಘಾಟನೆಗೊಳಿಸಿದ ಶಾಸಕ ಸಿಮೆಂಟ್ ಸಿಮೆಂಟ್ ಮಂಜು
ಈ ವೇಳೆ ಶಾಸಕ ಸಿಮೆಂಟ್ ಮಂಜು ಮಾತನಾಡಿ ಮಹಿಳಾ ಸಂಘಗಳಿಗೆ ಅನುಕೂಲವಾಗುವಂತೆ ಸಂಜೀವಿನಿ ಶೆಟ್ ಉದ್ಘಾಟನೆ ಗೊಂಡಿದೆ ಸರ್ಕಾರಿ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಹೈಟೆಕ್ ಶೌಚಾಲಯವು ಸಹ ನೀಡಲಾಗಿದೆ ಬಾಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿಯಿಂದ ಬೀದಿ ದೀಪಗಳು ಇಲ್ಲದೆ ಗ್ರಾಮಸ್ಥರಿಗೆ ತೊಂದರೆಯಾದ ಕಾರಣ ಬೀದಿ ದೀಪಗಳನ್ನು ಸಹ ಅಳವಡಿಸಲಾಗಿದೆ.
ನಾನು ಪಕ್ಷಾತೀತವಾಗಿ ಕೆಲಸ ಮಾಡುವುದಿಲ್ಲ ನನ್ನ ಕ್ಷೇತ್ರದ ಜನಗಳ ಸೇವೆಗೆ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಅಧ್ಯಕ್ಷರಾದ ರೇಖಾ ಗೋಪಿನಾಥ್ ಮಾತನಾಡಿ ನನ್ನ ಅವಧಿಯಲ್ಲಿ ಪಂಚಾಯತಿಯಲ್ಲಿ ಹಲವು ಕೆಲಸಗಳನ್ನು ನಿರ್ವಹಿಸಿದ್ದೇನೆ ಎಲ್ಲಾ ಸದಸ್ಯರುಗಳು ಸಹ ನನಗೆ ಬೆನ್ನೆಲುಬಾಗಿ ಸಹಕಾರ ನೀಡಿದ್ದಾರೆ ನಮ್ಮ ಅವಧಿ ಮುಕ್ತಾಯಗೊಳ್ಳುವ ಮುನ್ನ ಹಲವಾರು ಕಾಮಗಾರಿಗಳನ್ನು ಇಂದು ಶಾಸಕರ ನೇತೃತ್ವದಲ್ಲಿ ಉದ್ಘಾಟನೆಗೊಳಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸದಸ್ಯರುಗಳಾದ ಸವಿತಾ ಜಗದೀಶ್ , ವನಜಾಕ್ಷಿ, ಪುಷ್ಪ , ಗಿರಿಜಾ, ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಇಂಜಿನಿಯರ್ ಗಳು ಮತ್ತು ಪಂಚಾಯಿತಿ ಸಿಬ್ಬಂದಿ ವರ್ಗ ಹಾಜರಿದ್ದರು .
