ಸಕಲೇಶಪುರ ಪಟ್ಟಣದ ಕೆಲವು ಕಡೆ ಶುಕ್ರವಾರ (ನಾಳೆ) ವಿದ್ಯುತ್ ವ್ಯತ್ಯಯ

ಇದು ಕೆಇಬಿ ಇಲಾಖೆ ಸಕಲೇಶಪುರ,


ಸಾರ್ವಜನಿಕ ಪ್ರಕಟಣೆ :


ಸಕಲೇಶಪುರ:ಪಟ್ಟಣದಲ್ಲಿ ಅವಶ್ಯಕತೆ ಇರುವ ಕಡೆ, ಹಾಲಿ ಇರುವ ಅಲುಮಿನಿಯಂ ವಾಹಕವನ್ನು ಹೊಸ ಎಬಿ ಕೇಬಲ್ ನಿಂದ ಬದಲಾಯಿಸುವ ಕಾಮಗಾರಿಯು  ಚಾಲ್ತಿ ಇರುವುದರಿಂದ  ದಿನಾಂಕ 13.02.2026 ರಂದು ಶುಕ್ರವಾರ  ಬೆಳಿಗ್ಗೆ 10 ಗಂಟೆಯಿಂದ ಸಂಜೆ ಕಾಮಗಾರಿ ಮುಗಿಯುವವರೆಗೂ,  ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯವಾಗುತ್ತದೆಂದು ಹಾಗೂ ಸಾರ್ವಜನಿಕರು ಸಹಕರಿಸಬೇಕಾಗಿ ಈ ಮೂಲಕ ಕೋರಲಾಗಿದೆ.
1. ಅಶೋಕ ರಸ್ತೆಯ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದಿಂದ ಮಾರ್ಕೆಟ್ ವರೆಗಿನ ಎಡ ಭಾಗ ಹಾಗೂ ಬಲ ಭಾಗದ ಪ್ರದೇಶಗಳು
2. ಬಿ ಎಂ ರಸ್ತೆಯ ಶಾಪ್ ಸಿದ್ದೇಗೌಡ ಶಾಲಾ ಕಟ್ಟಡದ ಬದಿಯಿಂದ  ರಂಗನಾಥ ಬುಕ್ ಸ್ಟಾಲ್ ಕಟ್ಟಡದವರೆಗಿನ ಭಾಗ
3. ಬಿಎಂ ರಸ್ತೆಯ ವಿಷ್ಣು ಎಲೆಕ್ಟ್ರಿಕಲ್ಸ್ ಕಟ್ಟಡದಿಂದ ಶ್ರೀಯುತ ಎ ಕೆ ಸಾಗರ್ ರವರ ಸ್ಮರಣಾರ್ಥ ಕುಡಿಯುವ ನೀರಿನ ಘಟಕದವರೆಗಿನ ಭಾಗ
4. ಮಾರ್ಕೆಟ್ ರಸ್ತೆಯ ಶಾಪ್ ಸಿದ್ದೇಗೌಡ ಶಾಲಾ ಕಟ್ಟಡದಿಂದ ಶ್ರೀ ಝುಲ್ಫಿ ರವರ ಕಬ್ಬಿಣದ ಅಂಗಡಿ ವರೆಗಿನ ಎಡ ಭಾಗ ಹಾಗೂ ಬಲ ಭಾಗ
5. ವಿನೋಬಾ ರಸ್ತೆ
6. ಹಾಲಿನ ಡೈರಿಯನ್ನು ಒಳಗೊಂಡ ಬ್ರಾಹ್ಮಣರ ಬೀದಿ ರಸ್ತೆ
ಈ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದೆ ಎಂದು
  ಸಹಾಯಕ ಇಂಜಿನಿಯರ್ (ವಿ )ನಿರಂಜನ್ ಕೆ. ಆರ್. ತಿಳಿಸಿದ್ಧಾರೆ.

Leave a Reply

Your email address will not be published. Required fields are marked *

error: Content is protected !!