ಕೆ ಎಸ್ ಆರ್ ಟಿ ಸಿ ಚಾಲಕನ ಮೇಲೆ ಹಲ್ಲೆ ಪ್ರಕರಣ. ಓರ್ವ ಬಂಧನ

ಗಂಡಸಿ: ಕರ್ತವ್ಯ ನಿರತ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೇಲೆ ಹ* ನಡೆಸಿ, ಕೆಲಸಕ್ಕೆ ಅಡ್ಡಿಪಡಿಸಿದ ಘಟನೆಗೆ ಸಂಬಂಧಿಸಿದಂತೆ ಬಾಗೇಶಪುರದ ಶಶಿಕುಮಾರ್ (32) ಎಂಬಾತನನ್ನು ಗಂಡಸಿ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ:
ಕೆಎಸ್‌ಆರ್‌ಟಿಸಿ ಚಾಲಕ ಮೋಹನ್ ಅವರು ಬಸ್ಸಿನಲ್ಲಿ ಸುಮಾರು 78 ಪ್ರಯಾಣಿಕರನ್ನು ಹತ್ತಿಸಿಕೊಂಡು ಹೊರಡುತ್ತಿದ್ದರು. ಬಸ್ಸಿನಲ್ಲಿ ಅತಿಯಾದ ಜನದಟ್ಟಣೆ ಇದ್ದ ಕಾರಣ ಬಾಗಿಲು ಹಾಕಲು ಸಾಧ್ಯವಾಗಿರಲಿಲ್ಲ. ನಿರ್ವಾಹಕರು ಬಸ್ಸಿನ ಮಧ್ಯಭಾಗದಲ್ಲಿ ಟಿಕೆಟ್ ನೀಡುತ್ತಿದ್ದರು. ಚಾಲಕ ಮೋಹನ್ ಅವರು ಕನ್ನಡಿಯ ಮೂಲಕ ಗಮನಿಸಿ, ಸುರಕ್ಷತೆಯ ದೃಷ್ಟಿಯಿಂದ ಬಸ್ ನಿಲ್ಲಿಸಿ ಡೋರ್ ಹಾಕಲು ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ಡೋರ್ ಬಳಿ ಇದ್ದ ಮಹಿಳಾ ಪ್ರಯಾಣಿಕರೊಬ್ಬರು, “ಯಾಕೆ ತಳ್ಳುತ್ತಿದ್ದೀಯಾ?” ಎಂದು ಚಾಲಕನೊಂದಿಗೆ ವಾಗ್ವಾದಕ್ಕಿಳಿದು ಅವಾ*ಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಚಾಲಕ ಮೋಹನ್ ಅವರು ಬಾಗಿಲು ಹಾಕಿಕೊಂಡು ಬಾಗೇಶಪುರ ಬಸ್ ನಿಲ್ದಾಣದ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.
ಸಂಘಟಿತ ಹ*:
ಬಸ್ಸಿನಲ್ಲಿದ್ದ ಮಹಿಳೆ ಅಷ್ಟರಲ್ಲೇ ತನ್ನ ಕಡೆಯವರಿಗೆ ಫೋನ್ ಮಾಡಿ ಬಾಗೇಶಪುರ ನಿಲ್ದಾಣಕ್ಕೆ ಬರುವಂತೆ ತಿಳಿಸಿದ್ದಾರೆ. ಸಂಜೆ ಸುಮಾರು 5:50ರ ವೇಳೆಗೆ ಬಸ್ ನಿಲ್ದಾಣಕ್ಕೆ ತಲುಪಿದಾಗ, ಅಲ್ಲಿ ಕಾಯುತ್ತಿದ್ದ ವ್ಯಕ್ತಿಯೊಬ್ಬರು ಬಸ್ಸನ್ನು ಅಡ್ಡಗಟ್ಟಿದ್ದಾರೆ. ಏಕಾಏಕಿ ಚಾಲಕನ ಕಡೆಯ ಬಾಗಿಲನ್ನು ತೆಗೆದು ಮೋಹನ್ ಅವರಿಗೆ ಅವಾ*ಚ್ಯವಾಗಿ ಬೈಯುತ್ತಾ ಕೆನ್ನೆಗೆ ಹೊಡೆದು, ಹೊಟ್ಟೆ ಹಾಗೂ ಮೈಕೈಗೆ ಒದ್ದು ಬಸ್ಸಿನಿಂದ ಕೆಳಕ್ಕೆ ಎಳೆದಾಡಿದ್ದಾರೆ. ಅವರೊಂದಿಗೆ ಇದ್ದ ಇನ್ನೊಬ್ಬ ವ್ಯಕ್ತಿಯೂ ಸೇರಿ ಚಾಲಕನ ಮೇಲೆ ಹ* ನಡೆಸಿದ್ದಾರೆ ಎನ್ನಲಾಗಿದೆ.
ಕಾನೂನು ಕ್ರಮ:
“ಕರ್ತವ್ಯ ನಿರತ ಸರ್ಕಾರಿ ನೌಕರನ ಮೇಲೆ ಹ* ನಡೆಸಿರುವುದು, ಬಸ್ಸಿನ ಗಾಜು ಪುಡಿ ಮಾಡಿ ಕೊ* ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.”

ದೂರಿನ ಅನ್ವಯ ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಮುಖ ಆರೋಪಿ ಶಶಿಕುಮಾರ್‌ನನ್ನು ಬಂಧಿಸಿರುವ ಪೊಲೀಸರು ಉಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!