
ಗಂಡಸಿ: ಕರ್ತವ್ಯ ನಿರತ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೇಲೆ ಹ* ನಡೆಸಿ, ಕೆಲಸಕ್ಕೆ ಅಡ್ಡಿಪಡಿಸಿದ ಘಟನೆಗೆ ಸಂಬಂಧಿಸಿದಂತೆ ಬಾಗೇಶಪುರದ ಶಶಿಕುಮಾರ್ (32) ಎಂಬಾತನನ್ನು ಗಂಡಸಿ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ:
ಕೆಎಸ್‌ಆರ್‌ಟಿಸಿ ಚಾಲಕ ಮೋಹನ್ ಅವರು ಬಸ್ಸಿನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೊರಡುತ್ತಿದ್ದರು. ಬಸ್ಸಿನಲ್ಲಿ ಅತಿಯಾದ ಜನದಟ್ಟಣೆ ಇದ್ದ ಕಾರಣ ಬಾಗಿಲು ಹಾಕಲು ಸಾಧ್ಯವಾಗಿರಲಿಲ್ಲ. ನಿರ್ವಾಹಕರು ಬಸ್ಸಿನ ಮಧ್ಯಭಾಗದಲ್ಲಿ ಟಿಕೆಟ್ ನೀಡುತ್ತಿದ್ದರು. ಚಾಲಕ ಮೋಹನ್ ಸುರಕ್ಷತೆಯ ದೃಷ್ಟಿಯಿಂದ ಬಸ್ ನಿಲ್ಲಿಸಿ ಡೋರ್ ಹಾಕಲು ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ಡೋರ್ ಬಳಿ ಇದ್ದ ಮಹಿಳಾ ಪ್ರಯಾಣಿಕರೊಬ್ಬರು, “ಯಾಕೆ ತಳ್ಳುತ್ತಿದ್ದೀಯಾ?” ಎಂದು ಚಾಲಕನೊಂದಿಗೆ ವಾಗ್ವಾದಕ್ಕಿಳಿದು ಅವಾ*ಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಚಾಲಕ ಮೋಹನ್ ಅವರು ಬಾಗಿಲು ಹಾಕಿಕೊಂಡು ಬಾಗೇಶಪುರ ಬಸ್ ನಿಲ್ದಾಣದ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.
ಸಂಘಟಿತ ಹ*:
ಬಸ್ಸಿನಲ್ಲಿದ್ದ ಮಹಿಳೆ ಅಷ್ಟರಲ್ಲೇ ತನ್ನ ಕಡೆಯವರಿಗೆ ಫೋನ್ ಮಾಡಿ ಬಾಗೇಶಪುರ ನಿಲ್ದಾಣಕ್ಕೆ ಬರುವಂತೆ ತಿಳಿಸಿದ್ದಾರೆ. ಸಂಜೆ ಸುಮಾರು 5:50ರ ವೇಳೆಗೆ ಬಸ್ ನಿಲ್ದಾಣಕ್ಕೆ ತಲುಪಿದಾಗ, ಅಲ್ಲಿ ಕಾಯುತ್ತಿದ್ದ ವ್ಯಕ್ತಿಯೊಬ್ಬರು ಬಸ್ಸನ್ನು ಅಡ್ಡಗಟ್ಟಿದ್ದಾರೆ. ಏಕಾಏಕಿ ಚಾಲಕನ ಕಡೆಯ ಬಾಗಿಲನ್ನು ತೆಗೆದು ಮೋಹನ್ ಅವರಿಗೆ ಅವಾ*ಚ್ಯವಾಗಿ ಬೈಯುತ್ತಾ ಕೆನ್ನೆಗೆ ಹೊಡೆದು, ಹೊಟ್ಟೆ ಹಾಗೂ ಮೈಕೈಗೆ ಒದ್ದು ಬಸ್ಸಿನಿಂದ ಕೆಳಕ್ಕೆ ಎಳೆದಾಡಿದ್ದಾರೆ. ಅವರೊಂದಿಗೆ ಇದ್ದ ಇನ್ನೊಬ್ಬ ವ್ಯಕ್ತಿಯೂ ಸೇರಿ ಚಾಲಕನ ಮೇಲೆ ಹ* ನಡೆಸಿದ್ದಾರೆ ಎನ್ನಲಾಗಿದೆ.
ಕಾನೂನು ಕ್ರಮ:
“ಕರ್ತವ್ಯ ನಿರತ ಸರ್ಕಾರಿ ನೌಕರನ ಮೇಲೆ ಹ* ನಡೆಸಿರುವುದು, ಬಸ್ಸಿನ ಗಾಜು ಪುಡಿ ಮಾಡಿ ಕೊ* ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.”
ದೂರಿನ ಅನ್ವಯ ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಮುಖ ಆರೋಪಿ ಶಶಿಕುಮಾರ್‌ನನ್ನು ಬಂಧಿಸಿರುವ ಪೊಲೀಸರು ಉಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
