
ಹಾಸನ : ನಗರದ ಕೈಗಾರಿಕಾ ಪ್ರದೇಶದಲ್ಲಿ ನಿನ್ನೆ ರಾತ್ರಿ ದುರ್ಘಟನೆ ಸಂಭವಿಸಿದೆ. ಬುಲೆಟ್ ಬೈಕ್ ಜಾಲಿ ರೈಡ್ ವೇಳೆ ಹಂಪ್ಸ್ ಗಮನಿಸದೆ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದ ಪರಿಣಾಮ ಓರ್ವ ಯುವತಿ ಸ್ಥಳದಲ್ಲೇ ಸಾ*ವನ್ನಪ್ಪಿದ್ದು, ಮತ್ತೋರ್ವ ಯುವತಿಯ ಸ್ಥಿತಿ ಗ*ಭೀರವಾಗಿದೆ.ಮೃತ ಯುವತಿ: ಪ್ರಿಯಾ (23), ಸತ್ಯಮಂಗಲ ಬಡಾವಣೆ ಗಾಯಾಳು: ಸ್ವಾತಿ (24), ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನೆಅಪಘಾತದ ವೇಳೆ ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ ಎನ್ನಲಾಗಿದೆ. ಪ್ರಿಯಾ ಖಾಸಗಿ ಕಾಲೇಜಿನಲ್ಲಿ ಎಂಸಿಎ ಫೈನಲ್ ಇಯರ್ ಓದುತ್ತಿದ್ದರು. ಸ್ವಾತಿ ನವೆಂಬರ್‌ನಲ್ಲಿ ಮದುವೆಯಾಗಿದ್ದರು.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.ರಸ್ತೆ ಸುರಕ್ಷತೆ ನಮ್ಮೆಲ್ಲರ ಜವಾಬ್ದಾರಿ ಹೆಲ್ಮೆಟ್ ಧರಿಸಿ • ವೇಗ ನಿಯಂತ್ರಿಸಿ • ಹಂಪ್ಸ್ ಬಳಿ ಎಚ್ಚರಿಕೆ ವಹಿಸಿ
