
ಇದು ಕೆಇಬಿ ಇಲಾಖೆ
ಸಕಲೇಶಪುರ, ಸಾರ್ವಜನಿಕ ಪ್ರಕಟಣೆ :
ಸಕಲೇಶಪುರ:ಪಟ್ಟಣದಲ್ಲಿ ಅವಶ್ಯಕತೆ ಇರುವ ಕಡೆ, ಹಾಲಿ ಇರುವ ಅಲುಮಿನಿಯಂ ವಾಹಕವನ್ನು ಹೊಸ ಎಬಿ ಕೇಬಲ್ ನಿಂದ ಬದಲಾಯಿಸುವ ಕಾಮಗಾರಿಯು ಚಾಲ್ತಿ ಇರುವುದರಿಂದ ದಿನಾಂಕ: 24.02.2026 ರಂದು ಮಂಗಳವಾರ ದಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ ಕಾಮಗಾರಿ ಮುಗಿಯುವವರೆಗೂ, ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯವಾಗುತ್ತದೆಂದು ಹಾಗೂ ಸಾರ್ವಜನಿಕರು ಸಹಕರಿಸಬೇಕಾಗಿ ಈ ಮೂಲಕ ಕೋರಲಾಗಿದೆ.
ಈ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದೆ.
1. ಬಾಳೆಗದ್ದೆಯ ಸಂಪೂರ್ಣ ಹಾಗೂ ಜನತಾ ಕ್ವಾಟ್ರಸ್
ವಿಶೇಷ ಸೂಚನೆ: ಈ ಕಾಮಗಾರಿ ನಡೆಯುವ ಸಮಯದಲ್ಲಿ ಆ ಭಾಗದ ಜಂಪನ್ನು ತೆಗೆಯುವುದಕ್ಕಾಗಿ ಬೆಳಿಗ್ಗೆ ಹಾಗೂ ಸಂಜೆ ಅರ್ಧ ಗಂಟೆಗಳ ಕಾಲ ಶುಕ್ರವಾರ ಸಂತೆ, ಮಳಲಿ, ಹಾರ್ಲೆ, ಬೆಳಗೋಡು ಹಾಗೂ ಆನೆ ಮಹಲ್ ಸಂಪೂರ್ಣ ಮಾರ್ಗವು ಸ್ಥಗಿತಗೊಳ್ಳಲಿದೆ ಎಂದು ಸಹಾಯಕ ಇಂಜಿನಿಯರ್ ನಿರಂಜನ್ ಕೆ. ಆರ್. ತಿಳಿಸಿದ್ದಾರೆ.
