
ಮಾರ್ನಿಂಗ್ ಬಾಯ್ಸ್ ತಂಡಕ್ಕೆ ವಿಜಿ ಮೆಮೋರಿಯಲ್ ಕಪ್
ಸಕಲೇಶಪುರ :ಟೀಮ್ ಬ್ರದರ್ಸ್ ಸಿದ್ದಾಪುರ ಇವರ ವತಿಯಿಂದ ಕೋಗರವಳ್ಳಿಯ (ಕಬ್ಬಿನಗದ್ದೆ) ಅಂಬೇಡ್ಕರ್ ಆಟದ ಮೈದಾನದಲ್ಲಿ ಆಯೋಜಿಸಿದ್ದ ವಿಜಿ ಮೆಮೋರಿಯಲ್ ಕಪ್ ಗ್ರಾಮ ಪಂಚಾಯಿತಿ ಮಟ್ಟದ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಟ್ಟಣದ ಮಾರ್ನಿಂಗ್ ಬಾಯ್ಸ್ ತಂಡ ಅಂತಿಮ ಹಣಾಹಣಿಯಲ್ಲಿ ಹಾನುಬಾಳ್ ತಂಡವನ್ನು ಸೋಲಿಸಿ ಗೆಲುವು ಸಾಧಿಸಿದೆ. ಶಾಸಕ ಸಿಮೆಂಟ್ ಮಂಜು ವಿಜೇತ ಮಾರ್ನಿಂಗ್ ಬಾಯ್ಸ್ ತಂಡಕ್ಕೆ ಟ್ರೋಫಿ ಹಾಗೂ ನಗದು ವಿತರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಲೋಹಿತ್ ಜಂಬರಡಿ, ಮಾರ್ನಿಂಗ್ ಬಾಯ್ಸ್ ತಂಡದ ನಾಯಕ ರಘು ಕೊಪ್ಪಲು, ಆಟಗಾರರಾದ ನಿಶ್ಚಯ್, ಮಹೇಂದ್ರ, ವಿವೇಕ್, ಮತ್ತಿನ್, ಬೀರೇಶ್, ಪ್ರತಾಪ್, ಶಿವು,ಬೋಲ್ಟ್, ರೋಹಿತ್,ತೇಜು ಇತರರು ಹಾಜರಿದ್ದರು.
