
ಇದು ಕೆಇಬಿ ಇಲಾಖೆ ಸಕಲೇಶಪುರ,
ಸಾರ್ವಜನಿಕ ಪ್ರಕಟಣೆ :
ಸಕಲೇಶಪುರ:ಪಟ್ಟಣದಲ್ಲಿ ಅವಶ್ಯಕತೆ ಇರುವ ಕಡೆ, ಹಾಲಿ ಇರುವ ಅಲುಮಿನಿಯಂ ವಾಹಕವನ್ನು ಹೊಸ ಎಬಿ ಕೇಬಲ್ ನಿಂದ ಬದಲಾಯಿಸುವ ಕಾಮಗಾರಿಯು ಚಾಲ್ತಿ ಇರುವುದರಿಂದ ದಿನಾಂಕ: 25.02.2026 ರಂದು ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ ಕಾಮಗಾರಿ ಮುಗಿಯುವವರೆಗೂ, ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯವಾಗುತ್ತದೆಂದು ಹಾಗೂ ಸಾರ್ವಜನಿಕರು ಸಹಕರಿಸಬೇಕಾಗಿ ಈ ಮೂಲಕ ಕೋರಲಾಗಿದೆ.
1. ತೇಜಸ್ವಿ ಸರ್ಕಲ್ ಸಮೀಪದ ಬಿಎಂ ರಸ್ತೆಯ ಹೇಮಗಂಗಾ ಸರ್ವಿಸ್ ಸ್ಟೇಷನ್ ಕಟ್ಟಡದ ಭಾಗದಿಂದ ಹೇಮಾವತಿ ಪ್ರತಿಮೆ ವರೆಗಿನ ಭಾಗ
2. ತೇಜಸ್ವಿ ಸರ್ಕಲ್ ಸಮೀಪದ ಬಿಎಮ್ ರಸ್ತೆಯ ಶೀತಲ್ ವೈನ್ಸ್ ಕಟ್ಟಡದಿಂದ ಟೌನ್ ಸ್ಕ್ವಯರ್ ಕಟ್ಟಡದವರೆಗಿನ ಭಾಗ
3. ವಿಶಾಲ್ ಮಾರ್ಟ್ ಹಿಂಭಾಗದ ಸಂಪೂರ್ಣ ಪ್ರವೀಣ್ ಲೇಔಟ್ ಹಾಗೂ ದಯಾನಂದ ಲೇಔಟ್ ಪ್ರದೇಶ
4. ವಿಶಾಲ್ ಮಾರ್ಟ್ ಕಟ್ಟಡ ಹಾಗೂ ಸುತ್ತಮುತ್ತಲ ಪ್ರದೇಶ
5. ಆರ್ ಬಿ ಸ್ಟೀಲ್ ಕಟ್ಟಡ ಹಾಗೂ ಸುತ್ತಮುತ್ತ ಪ್ರದೇಶ
ಈ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದೆ ಎಂದು ಸಹಾಯಕ ಇಂಜಿನಿಯರ್ ನಿರಂಜನ್ ಕೆ. ಆರ್. ತಿಳಿಸಿದ್ದಾರೆ.
