
ಸಕಲೇಶಪುರ:- ಭಾರತೀಯ ಸಂಬಾರ ಮಂಡಳಿ ಸಕಲೇಶಪುರ ವತಿಯಿಂದ “ಕಾಳು ಮೆಣಸು ಉತ್ಪಾದನೆಯಲ್ಲಿ ಗುಣಮಟ್ಟ ಸುಧಾರಣೆ” ವಿಷಯದ ಕುರಿತು ಕಾರ್ಯಾಗಾರವನ್ನು ದಿನಾಂಕ :-27.02.2026 ಶುಕ್ರವಾರ ಬೆಳಿಗ್ಗೆ 10.00 ಗಂಟೆಗೆ ನಮ್ಮ ವಳಲಹಳ್ಳಿ ಗ್ರಾಮಪಂಚಾಯಿತಿ ಬೆಳೆಗಾರರ ಸಂಘದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಬೆಳೆಗಾರರ ಸಂಘದ ಅಧ್ಯಕ್ಷರಾದ ಶ್ರೀ ವಿ.ಪಿ. ವಿಶ್ವನಾಥ್ ವಹಿಸಿಕೊಳ್ಳಲಿದ್ದಾರೆ. ಸಂಬಾರ ಮಂಡಳಿಯ ಮುಖ್ಯ ಅತಿಥಿಗಳಾಗಿ ಶ್ರೀ ಸುಂದರೇಶ್ ಎನ್. (ಉಪಸಂಚಾಲಕರು, ಸಂಬಾರ ಮಂಡಳಿ, ಸಕಲೇಶಪುರ) ಭಾಗವಹಿಸಲಿದ್ದಾರೆ.
ತಾಂತ್ರಿಕ ವಿಚಾರಗೋಷ್ಠಿಯಲ್ಲಿ ಶ್ರೀ ಡಾ. ಹರ್ಷ ಕೆ.ಎನ್. (ವಿಜ್ಞಾನಿಗಳು, ಭಾರತೀಯ ಮಸಾಲೆ ಸಂಶೋಧನಾ ಸಂಸ್ಥೆ, ದೋಣಿಗಲ್) “ಕಾಳು ಮೆಣಸು ಉತ್ಪಾದನೆಯಲ್ಲಿ ಗುಣಮಟ್ಟ ಸುಧಾರಣಾ ಪದ್ಧತಿಗಳು” ಕುರಿತು ಉಪನ್ಯಾಸ ನೀಡಲಿದ್ದಾರೆ.
ಶ್ರೀ ಎನ್.ಕುಮಾರ್ (ಹಿರಿಯ ಕೃಷಿ ಅಧಿಕಾರಿಗಳು, ಸಂಬಾರ ಮಂಡಳಿ, ಸಕಲೇಶಪುರ) “ಕಾಳು ಮೆಣಸಿನ ಕೊಯ್ಲೋತ್ತರ ಪದ್ಧತಿಗಳು, ಗುಣಮಟ್ಟ ಸುಧಾರಣೆ ಮತ್ತು ಉತ್ಪಾದನೆಯಲ್ಲಿ ದರ ಹಾಗೂ ಮಾರುಕಟ್ಟೆ ನಿಗದಿ” ವಿಷಯವಾಗಿ ಮಾಹಿತಿ ನೀಡಲಿದ್ದಾರೆ.
ಗ್ರಾಮಪಂಚಾಯಿತಿ ವ್ಯಾಪ್ತಿಯ ಬೆಳೆಗಾರರು ಹಾಗೂ ಆಸಕ್ತ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ವಿನಂತಿ ಮಾಡಲಾಗಿದೆ.
ಅಧ್ಯಕ್ಷರು/ ಕಾರ್ಯದರ್ಶಿ
ವಳಲಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘ.
