9 ರೂಪಾಯಿಗೆ ಬ್ಯಾಂಕ್ ಕಾಲ್!?  ಗ್ರಾಹಕ ಶಾಕ್! – ಸಕಲೇಶಪುರದಲ್ಲಿ ವಿಚಿತ್ರ ಘಟನೆ

ಸಕಲೇಶಪುರ : ಬ್ಯಾಂಕುಗಳ ಸಣ್ಣ ತಪ್ಪುಗಳು ಅಥವಾ ತಾಂತ್ರಿಕ ಕಾರಣಗಳು ಜನಸಾಮಾನ್ಯರನ್ನು ಎಷ್ಟು ಹೈರಾಣಾಗಿಸುತ್ತವೆ ಎಂಬುದಕ್ಕೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಕೇವಲ 66 ಪೈಸೆ ಹಣದ ವಿಚಾರಕ್ಕಾಗಿ ವ್ಯಕ್ತಿಯೊಬ್ಬರು  ಬ್ಯಾಂಕ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.
ಘಟನೆಯ ಹಿನ್ನೆಲೆ:
ಸಕಲೇಶಪುರದ ನಿವಾಸಿ, ವಕೀಲರಾದ ಚರಣ್ ಎಂಬುವವರು ಸ್ಥಳೀಯ ಬ್ಯಾಂಕ್ ಶಾಖೆಯಲ್ಲಿ ಸಾ*ಲ ಪಡೆದಿದ್ದರು. ಇತ್ತೀಚೆಗೆ ಅವರ ಮೊಬೈಲ್‌ಗೆ ಬ್ಯಾಂಕ್‌ನಿಂದ ಸಂದೇಶವೊಂದು ಬಂದಿದ್ದು, ಅದರಲ್ಲಿ ಅವರ ಸಾಲದ ಬಾಕಿ ಮೊತ್ತ 9 ರೂಪಾಯಿ 34 ಪೈಸೆ ಇದೆ ಎಂದು ತಿಳಿಸಲಾಗಿತ್ತು.
ಬ್ಯಾಂಕ್ ಸೂಚನೆಯಂತೆ ಚರಣ್ ಅವರು ಸಾಲದ ಖಾತೆಗೆ 10 ರೂಪಾಯಿ ಪಾವತಿಸಿದ್ದಾರೆ. ಆದರೆ, ಬಾಕಿ ಮೊತ್ತ ಕಳೆದು ಉಳಿದ 66 ಪೈಸೆ ಹಣವನ್ನು ವಾಪಸ್ ನೀಡುವಂತೆ ಅವರು ಬ್ಯಾಂಕ್ ಸಿಬ್ಬಂದಿಯನ್ನು ಕೇಳಿದಾಗ, ಸಿಬ್ಬಂದಿ ಅದನ್ನು ನಿರ್ಲಕ್ಷಿಸಿದ್ದಾರೆ ಎನ್ನಲಾಗಿದೆ.
ಆಕ್ರೋ*ಶಕ್ಕೆ ಕಾರಣವೇನು?
“ಬ್ಯಾಂಕಿನವರು ಗ್ರಾಹಕರಿಂದ ಒಂದು ಪೈಸೆ ಬಾಕಿ ಇದ್ದರೂ ಬಿಡುವುದಿಲ್ಲ. ಆದರೆ ಗ್ರಾಹಕರ ಹಣ ಉಳಿದಾಗ ಅದನ್ನು ಹಿಂದಿರುಗಿಸಲು ತೋರುವ ಬೇಜವಾಬ್ದಾರಿತನ ಸರಿಯಲ್ಲ” ಎಂಬುದು ಚರಣ್ ಅವರ ವಾದ.
“ಇದು ಕೇವಲ 66 ಪೈಸೆಯ ವಿಚಾರವಲ್ಲ, ಇದು ಬ್ಯಾಂಕ್‌ಗಳ ಕಾರ್ಯವೈಖರಿ ಮತ್ತು ಗ್ರಾಹಕರ ಹಕ್ಕಿನ ಪ್ರಶ್ನೆ. ನ್ಯಾಯಕ್ಕಾಗಿ ನಾನು ಕೋರ್ಟ್ ಮೊರೆ ಹೋಗಲು ಸಿದ್ಧನಿದ್ದೇನೆ.”
— ಚರಣ್, ವಕೀಲರು

ಮುಂದಿನ ನಡೆ:
ಬ್ಯಾಂಕ್ ಅಧಿಕಾರಿಗಳ ವರ್ತನೆಯಿಂದ ಬೇಸತ್ತಿರುವ ಅವರು, ಗ್ರಾಹಕರ ಹಿತರಕ್ಷಣೆ ಮತ್ತು ಬ್ಯಾಂಕ್‌ನ ಪಾರದರ್ಶಕತೆಗಾಗಿ ಈ ಹೋರಾಟ ಅನಿವಾರ್ಯ ಎಂದು ಹೇಳಿದ್ದಾರೆ. ಈ ಘಟನೆ ಸದ್ಯ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಬ್ಯಾಂಕ್‌ಗಳ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿನ ಸಣ್ಣ ಮೊತ್ತದ ಗೊಂದಲಗಳ ಮೇಲೆ ಬೆಳಕು ಚೆಲ್ಲಿದೆ.

Leave a Reply

Your email address will not be published. Required fields are marked *

error: Content is protected !!