ಗಾಂಜಾ ಮಾರಾಟ-ಆರೋಪಿ ಬಂಧನ : 41,565 ಕೆ.ಜಿ ಗಾಂಜಾ ವಶ

ಶಾಂತಿಗ್ರಾಮ: ಗಾಂಜಾವನ್ನು ಸಾಗಾಟ ಮಾಡಿ ಸಂಗ್ರಹಿಸಿಟ್ಟು ಕೊಂಡು ಕಾಲೇಜು ವಿದ್ಯಾರ್ಥಿ ಗಳು ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋ ಪದಡಿ ವ್ಯಕ್ತಿಯೊಬ್ಬನನ್ನು ಶಾಂತಿ ಗ್ರಾಮ ಪೊಲೀಸರು ಬಂಧಿಸಿದ್ದು, ಆತನಿಂದ 20.78ಲಕ್ಷ ಮೌಲ್ಯದ 41.565ಕೆ.ಜಿ ಒಣಗಿದ ಗಾಂಜಾ ವಶಪಡಿಸಿಕೊಂಡಿದ್ದಾರೆ.ಶಾಂತಿಗ್ರಾಮ ಪೊಲೀಸ್ ಠಾಣೆಯ ಪೊಲೀಸ್ ಉಪನಿ ರೀಕ್ಷಕ ಅರುಣ್ ಅವರಿಗೆ ದೊ ರೆತ ಖಚಿತ ಮಾಹಿತಿಯ ಮೇ ರೆಗೆ ಸೋಮವಾರ ಬೆಳಿಗ್ಗೆ ಮೊಸ ಳೆಹೊಸಳ್ಳಿ ಎಪಿಎಂಸಿ ಸಮೀಪ – ದಾಳಿ ನಡೆಸಲಾಯಿತು.ಈ ವೇಳೆ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆ ಸಿದಾಗ, ಆತನ ಬಳಿ ಹೆಚ್ಚಿನ ಪ್ರ ಮಾಣದ ಗಾಂಜಾ ಪತ್ತೆಯಾ ಯಿತು. ಬಂಧಿತನನ್ನು ಮಂಡ್ಯ ಜಿಲ್ಲೆಯ ಪಾಂಡವಪುರ ನಿವಾಸಿ ಅಲೀಂ ಮುಲ್ಲಾ ಶರೀಫ್ (36) ಎಂದು ಗುರುತಿಸಲಾಗಿದೆ.ಪೊಲೀಸರು ಆರೋಪಿ ಯಿಂದ ಸುಮಾರು 41ಕೆ.ಜಿ 565ಗ್ರಾಂ ತೂಕದ ಒಣಗಿದಗಾಂಜಾ ಸೊಪ್ಪನ್ನು ವಶಪಡಿಸಿ ಕೊಂಡಿದ್ದು, ಇದರ ಮೌಲ್ಯ ಅಂದಾಜು 20.78ಲಕ್ಷ ಎಂದು ತಿಳಿದುಬಂದಿದೆ.ಈ ಸಂಬಂಧ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಮಾದಕ ದ್ರವ್ಯ ಮತ್ತು ಮನೋವಿಕೃತ ಔಷಧಗಳ ನಿಯಂತ್ರಣ ಕಾಯ್ದೆ (ಎನ್‌ಡಿಪಿಎಸ್) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!