ಹಾಸನ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ರೌಡಿಸಂ ಮತ್ತು ಅಪರಾಧ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಭರ್ಜರಿ ಸಿದ್ಧತೆ ನಡೆಸಿದೆ

ಹಾಸನ: ಜಿಲ್ಲೆಯ ಪ್ರತಿಯೊಂದು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲೂ ತಲಾ ಒಂದು ‘ರೌಡಿ ಸ್ಕ್ವಾಡ್’ (ವಿಶೇಷ ಪಡೆ) ರಚಿಸಲು ಗಂಭೀರ ಚಿಂತನೆ ನಡೆಸಲಾಗುತ್ತಿದೆ ಎಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಶುಭನ್ವಿತಾ ಅವರು ತಿಳಿಸಿದ್ದಾರೆ.​ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತು ಸಾರ್ವಜನಿಕರಲ್ಲಿ ಧೈರ್ಯ ತುಂಬಲು ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಇದರ ಭಾಗವಾಗಿ ಜಿಲ್ಲಾದ್ಯಂತ ಒಟ್ಟು 20 ವಿಶೇಷ ರೌಡಿ ಸ್ಕ್ವಾಡ್‌ಗಳು ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು.​

ಠಾಣಾ ಮಟ್ಟದಲ್ಲಿ ಕಠಿಣ ನಿಗಾ

• ​20 ವಿಶೇಷ ಪಡೆಗಳ ರಚನೆ: ಜಿಲ್ಲೆಯ ಪ್ರಮುಖ ಠಾಣೆಗಳನ್ನು ಕೇಂದ್ರೀಕರಿಸಿ ರೌಡಿಗಳ ಚಟುವಟಿಕೆಗಳ ಮೇಲೆ ನಿಗಾ ಇಡಲು ಈ ಪಡೆಗಳು ಕೆಲಸ ಮಾಡಲಿವೆ.

• ​ಬಡ್ಡಿಂಗ್ ರೌಡಿಗಳ ಮೇಲೆ ಕಣ್ಣು: ಇತ್ತೀಚೆಗೆ ಅಪರಾಧ ಲೋಕದ ಕಡೆಗೆ ಆಕರ್ಷಿತರಾಗುತ್ತಿರುವ ಇನ್‌ಸ್ಟಾಗ್ರಾಮ್/ಸಾಮಾಜಿಕ ಜಾಲತಾಣದ ‘ಬಡ್ಡಿಂಗ್ ರೌಡಿಗಳ’ (ಉದಯೋನ್ಮುಖ ರೌಡಿಗಳು) ಮೇಲೆಯೂ ಪೊಲೀಸ್ ಇಲಾಖೆ ತೀವ್ರ ನಿಗಾ ಇರಿಸಲಿದೆ.​ಗಡೀಪಾರು ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ​ಜಿಲ್ಲೆಯಿಂದ ಈಗಾಗಲೇ ಗಡೀಪಾರು ಶಿಕ್ಷೆಗೆ ಒಳಗಾಗಿದ್ದರೂ, ಆದೇಶ ಉಲ್ಲ0ಘಿಸಿ ಜಿಲ್ಲೆಯೊಳಗೆ ರಹಸ್ಯವಾಗಿ ಸಂಚರಿಸುತ್ತಿರುವವರ ಪತ್ತೆಗೆ ವಿಶೇಷ ಕಾರ್ಯಾಚರಣೆ ಶೀಘ್ರದಲ್ಲೇ ಆರಂಭವಾಗಲಿದೆ. ತಲೆಮರೆಸಿಕೊಂಡಿರುವ ಅಪರಾಧಿಗಳನ್ನು ಪತ್ತೆ ಹಚ್ಚಿ ಜೈಲಿಗಟ್ಟಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.​70 ರೌಡಿಶೀಟರ್‌ಗಳ ಪಟ್ಟಿ ಸಿದ್ಧ!”

ಜಿಲ್ಲೆಯಲ್ಲಿ ಸದ್ಯಕ್ಕೆ ಸುಮಾರು 70 ರೌಡಿಶೀಟರ್‌ಗಳನ್ನು ಗಡೀಪಾರು ಮಾಡಲು ಪಟ್ಟಿ ಸಿದ್ಧಪಡಿಸಲಾಗಿದೆ. ಇವರಲ್ಲಿ ಹಲವರು ಒಂದಕ್ಕಿಂತ ಹೆಚ್ಚು ಕೊಲೆ ಪ್ರಕರಣಗಳಲ್ಲಿ ಭಾಗಿಯಾದ ಭೀ*ಕರ ಹಿನ್ನೆಲೆಯುಳ್ಳವರಾಗಿದ್ದಾರೆ. ಇವರ ವಿರುದ್ಧ ಗೂ0ಡಾ ಕಾಯ್ದೆಯಡಿ (Go0nda Act) ಕ್ರಮ ಜರುಗಿಸುವುದರ ಜೊತೆಗೆ, ಕೋರ್ಟ್‌ನಲ್ಲಿ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ನಮ್ಮ ಗುರಿ.”— ಶೂಭನ್ವಿತಾ, ಎಸ್ಪಿ, ಹಾಸನ ​

ಸಾಕ್ಷಿಗಳಿಗೆ ರಕ್ಷಣೆ, ಆರೋಪಿಗಳಿಗೆ ಶಿಕ್ಷೆ​ಕೊಲೆ ಪ್ರಕರಣಗಳಲ್ಲಿ (IPC 302) ಭಾಗಿಯಾದ ಆರೋಪಿಗಳಿಗೆ ಕಾನೂನಿನಡಿ ಕಠಿಣ ಶಿಕ್ಷೆ ಕೊಡಿಸಲು ಪೊಲೀಸ್ ಇಲಾಖೆ ಕಾನೂನು ಹೋರಾಟವನ್ನು ಬಲಪಡಿಸಲಿದೆ. ಮುಖ್ಯವಾಗಿ ಕೋರ್ಟ್‌ಗಳಲ್ಲಿ ಸಾಕ್ಷ್ಯ ನುಡಿಯುವ ಸಾಕ್ಷಿಗಳಿಗೆ ಸೂಕ್ತ ರಕ್ಷಣೆ ನೀಡಲಾಗುವುದು. ಸಾಕ್ಷಿಗಳು ಭಯಮುಕ್ತವಾಗಿ ಕೋರ್ಟ್‌ಗೆ ಬಂದು ಹೇಳಿಕೆ ನೀಡುವಂತಹ ವಾತಾವರಣ ನಿರ್ಮಿಸಿ, ಯಾವುದೇ ಪ್ರಭಾವಕ್ಕೂ ಮಣಿಯದೆ ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು ಆದ್ಯತೆ ನೀಡಲಾಗುವುದು ಎಂದು ಎಸ್ಪಿ ಸ್ಪಷ್ಟಪಡಿಸಿದರು.​ಪೊಲೀಸ್ ಇಲಾಖೆಯ ಈ ಹೊಸ ನಡೆ ಹಾಸನ ಜಿಲ್ಲೆಯ ಜನತೆಯಲ್ಲಿ ನಿರಾಳತೆ ತಂದಿದ್ದು, ರೌಡಿಗಳ ಪಾಲಿಗೆ ಸಿಂಹಸ್ವಪ್ನವಾಗುವ ಮುನ್ಸೂಚನೆ ನೀಡಿದೆ.

Leave a Reply

Your email address will not be published. Required fields are marked *

error: Content is protected !!