ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಸಕಲೇಶಪುರ:- ಬಾಗೆ ವಲಯದ ಬಾಳೆಗದ್ದೆ ಕಾರ್ಯಕ್ಷೇತ್ರದಲ್ಲಿ ದಿನಾಂಕ:-09/06/2026 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಕಲೇಶಪುರ ವತಿಯಿಂದ “ಸ್ವಾಸ್ಥ್ಯ ಸಂಕಲ್ಪ” ಕಾರ್ಯಕ್ರಮನ್ನು ಪ್ರಜ್ಞಾ ಪದವಿ ಪೂರ್ವ ಕಾಲೇಜಿನಲ್ಲಿ ನೆರವೇರಿಸಿ ಈ ಕಾರ್ಯಕ್ರಮವನ್ನು ಡಾ. ನವೀನ ಚಂದ್ರ ಶೆಟ್ಟಿ , ಅಧ್ಯಕ್ಷರು ಜಿಲ್ಲಾ ಜನ ಜಾಗೃತಿ ವೇದಿಕೆ ಹಾಸನ,ಇವರು ಉದ್ಘಾಟಿಸಿ ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಇತ್ತಿಚಿನ ದಿನಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಮದ್ಯಪಾನ ಮತ್ತು ಧೂಮಪಾನ, ಡ್ರಗ್ಸ್ ಇತ್ಯಾದಿಗಳು ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ‌ ಬೀರುತ್ತದೆ ಮತ್ತು ದುಶ್ಚಟದಿಂದ ಸ್ವಾಸ್ಥ್ಯ ಸಮಾಜದ ಮೇಲೆ ಪರಿಣಾಮ ಬೀರುವ ಬಗ್ಗೆ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಗಿರೀಶ್ ಮಂಜುನಾಥ, ಜನ ಜಾಗೃತಿ ವೇದಿಕೆ ರವರು ಮಾತನಾಡಿ ಒಳ್ಳೆಯ ಶಿಕ್ಷಣ ಜೊತೆ ಸಂಸ್ಕಾರ ಸಂಸ್ಕೃತಿ ಜೊತೆಯಲ್ಲಿ ಕಲಿಯಬೇಕು ಮತ್ತು ತಂದೆ ತಾಯಿಯ ಒಳ್ಳೆಯ ಮಗನಾಗಿ ಸಮಾಜಕ್ಕೆ ಒಳ್ಳೆಯ ವ್ಯಕ್ತಿಯಗಳಾಗಿ,ಬೆಳೆಯಬೇಕು ಎಂದು ತಿಳಿಸಿದರು. ರಾಜೇಶ್ ಎಮ್. ಯೋಜನಾಧಿಕಾರಿಗಳು ಮಾತನಾಡಿ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಹಾಗೂ ನೈತಿಕ ಮೌಲ್ಯಗಳ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಖಜಾಂಚಿಯವರಾದ ಸಂದೇಶ ಜಿ ಕೆ , ಉಪನ್ಯಾಸಕರಾದ ಚೇತನ್ ವಲಯದ ಮೇಲ್ವಿಚಾರಕರಾದ ಶಿವಾನಂದ, ಸೇವಾ ಪ್ರತಿನಿಧಿ ರೂಪಾ,ಅರ್ಶಿಯಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!