ಒತ್ತುವರಿ ಜಾಗ ತೆರವು

ಸಕಲೇಶಪುರ :ಸಕಲೇಶಪುರ ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ನೇತೃತ್ವದ ತಂಡ ಇಂದು ಮಾರನಹಳ್ಳಿ ಶಾಖೆಯ ಕೆಂಪು ಹೊಳೆ ಮೀಸಲು ಅರಣ್ಯದಲ್ಲಿ ಹಾದುಹೋಗುವ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ -75 ರಸ್ತೆಯ ಮೀಸಲು ಅರಣ್ಯದ ಗಡಿ ಭಾಗದ ಸರ್ವೇ ನಂಬರ್ 401ರ ಸ್ಥಳಕ್ಕೆ ಭೇಟಿ ನೀಡಿ ,ಪಕ್ಕದಲ್ಲೇ ಇರುವ ಹೋಟೆಲ್ ಮಾಲೀಕ ಗಿರೀಶ್ ಎಂಬುವರು ಜಾಗಕ್ಕೆ ಮಣ್ಣನ್ನು ತುಂಬಿಸಿ ಸುಮಾರು 5 ಗುಂಟೆ ಅರಣ್ಯ ಜಾಗವನ್ನು ಒತ್ತುವರಿ ಮಾಡಿದ್ದರು. ಸ್ಥಳಕ್ಕೆ ಅವರನ್ನು ಕರೆಸಿ ಕಾನೂನು ನಿಯಮಗಳನ್ನು ತಿಳಿಸಿ ಹಸಿರು ಹಾಸನ ಅಭಿಯಾನದ ಅಡಿಯಲ್ಲಿ ವಿವಿಧ ಸಸಿಗಳನ್ನು ಸ್ವತಃ ಅವರಿಂದಲೆ ನಡುವುದರ ಮೂಲಕ ಒತ್ತುವರಿಯನ್ನು ತೆರವು ಗೊಳಿಸಲಾಯಿತು. ಹಾಗೂ ಮಳೆಗಾಲದಲ್ಲಿ ಒತ್ತುವರಿ ಹೆಚ್ಚಾಗುವುದರಿಂದ ಸಿಬ್ಬಂದಿಗಳಿಗೆ ಎಚ್ಚರಿಕೆಯಿಂದ ಗಸ್ತು ತಿರುಗಲು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!