

ಸಕಲೇಶಪುರ: ತಾಲೂಕಿನ ಹಾನುಬಾಳು ಸಮೀಪ ಅಗಲಹಟ್ಟಿ ಎಸ್ಟೇಟ್ ಬಳಿ ಇಂದು ಮಧ್ಯಾಹ್ನ ಗೂಡ್ಸ್ ವಾಹನ( ಟಾಟಾ ಇಂಟ್ರಾ ) ಹಾಗೂ ರಿಟ್ಸ ಕಾರು ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಪಟ್ಟಣದ ಕುಶಾಲನಗರ ನಿವಾಸಿ ಅಸ್ಲಾಂ ಹಾಗೂ ಸುಹೇಬ್ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಆಂಬುಲೆನ್ಸ್ ಮೂಲಕ ಸಕಲೇಶಪುರದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
