ವರ್ಗಾವಣೆಗೊಂಡ ಡಾ. ರತ್ನಾಕರ್ ಕಿಣಿರವರಿಗೆ ಆಸ್ಪತ್ರೆಯ ಗ್ರೂಪ್ ‘ಡಿ’ ನೌಕರರಿಂದ ಬೀಳ್ಕೊಡುಗೆ

ಸಕಲೇಶಪುರ : ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ಜನರ ನಾಡಿಮಿಡಿತಕ್ಕೆ ಸ್ಪಂದಿಸಿದ ಕಿಣಿ, ಸಕಲೇಶಪುರ ಜನರ ಸೇವೆಯನ್ನು ಮುಗಿಸಿ ವರ್ಗಾವಣೆಗೊಂಡ ಜನಪ್ರಿಯ ವೈದ್ಯರಾದ ಡಾಕ್ಟರ್ ರತ್ನಾಕರ್ ಕಿಣಿ ಅವರಿಗೆ ಆಸ್ಪತ್ರೆಯ ಗ್ರೂಪ್ ‘ಡಿ’ ನೌಕರರಿಂದ ಹೃದಯಪೂರ್ವಕ ಬೀಳ್ಕೊಡುಗೆಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗ್ರೂಪ್ ‘ಡಿ’ಸಂಘದ ಅಧ್ಯಕ್ಷರಾದ ಮಂಜುನಾಥ ಕೆ. ಎಸ್. ಅವರು ಮಾತನಾಡಿ ಸುಮಾರು 13 ವರ್ಷಗಳಿಂದ ನಿರಂತರ ಸೇವೆ ನೀಡಿ ಸಕಲೇಶಪುರ ಮತ್ತು ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ಹೆಸರುವಾಸಿಯಾದಂತಹ ಇವರು ಬಡ ಜನರಿಗೆ ಉತ್ತಮವಾದ ಚಿಕಿತ್ಸೆ ನೀಡಿ ಜನರ ಹೃದಯ ಗೆದ್ದಂತಹ ವೈದ್ಯರಾಗಿದ್ದರು. ಇವರು ಶೃಂಗೇರಿಗೆ ವರ್ಗಾವಣೆಗೊಂಡಿದ್ದು, ಅವರ ಮುಂದಿನ ಸೇವೆಯು ಇದೇ ರೀತಿ ಮುಂದುವರೆಯಲಿ ಎಂದು ಹಾಗೂ ಅವರ ಜೀವನದಲ್ಲಿ ಸುಖ, ಸಮೃದ್ಧಿ, ನೆಲೆಸಲೆಂದು ಹೇಳಿದರು. ಈ ಸಂದರ್ಭದಲ್ಲಿ ಗ್ರೂಪ್ ‘ಡಿ’ ಸಿಬ್ಬಂದಿಗಳಾದ ಅರುಣ್, ಸಂದೀಪ, ಪ್ರಸನ್ನ,ಲೋಕೇಶ,ಅನಿಲ್, ಚಂದ್ರು, ಅರುಣ್ ಕುಮಾರ್, ಸುಮಂತ್ ಶುಭ ಕೋರಿದರು.

Leave a Reply

Your email address will not be published. Required fields are marked *

error: Content is protected !!