
ಕೊಲೆ ಪ್ರಕರಣ. ಆರೋಪಿ ಬಂಧನಸಕಲೇಶಪುರ: ಪಟ್ಟಣದ ಅಗ್ರಹಾರ ಬಡಾವಣೆಯ ಶರತ್ (ಡಿಜೆ )ಎಂಬಾತನು ಸಕಲೇಶಪುರದ ಎನ್.ಡಿ. ಅನುಷಾ ಅವರೊಂದಿಗೆ ಲಿವ್-ಇನ್ ಸಂಬಂಧ ಹೊಂದಿದ್ದನು. ಈ ಹಿನ್ನೆಲೆ ಬೆಂಗಳೂರಿನ ಶೇಷಾದ್ರಿಪುರಂ ಪ್ರದೇಶದಲ್ಲಿ ಅನುಷಾ ಅವರಿಗೆ ಬಾಡಿಗೆ ಮನೆಯನ್ನು ಒದಗಿಸಿದ್ದ ಎನ್ನಲಾಗಿದೆ.ಜೂನ್ 13, 2026ರಂದು ರಾತ್ರಿ ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಅನುಷಾ ಅವರನ್ನು ಕೊಲೆ ಮಾಡಿರುವ ಆರೋಪ ಶರತ್ ಮೇಲಿದ್ದು, ಬಳಿಕ ಪೊಲೀಸರ ದಿಕ್ಕು ತಪ್ಪಿಸುವ ಉದ್ದೇಶದಿಂದ ಸಕಲೇಶಪುರಕ್ಕೆ ಬಂದು ಸಾಮಾನ್ಯವಾಗಿ ಓಡಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.ಪ್ರಕರಣದ ತನಿಖೆ ಕೈಗೊಂಡಿದ್ದ ಬೆಂಗಳೂರಿನ ಶೇಷಾದ್ರಿಪುರಂ ಠಾಣೆ ಪೊಲೀಸರು, ಸಕಲೇಶಪುರ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ವಿ.ಸಿ. ವನರಾಜು ಹಾಗೂ ಸಿಬ್ಬಂದಿಗಳಾದ ಪೃಥ್ವಿ ಮತ್ತು ಮಧು ಅವರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ, ತಡರಾತ್ರಿ ಶರತ್‌ನನ್ನು ಬಂಧಿಸಿದ್ದಾರೆ.
