


ಸಕಲೇಶಪುರ: ಟಾಟಾ ಪವರ್ ಕಂಪನಿ ಲಿಮಿಟೆಡ್ ಎಸ್ಕಾಂಗಳ ವ್ಯಾಪ್ತಿಯಲ್ಲಿ ವಿದ್ಯುತ್ ಪರವಾನಿಗಿಗಾಗಿ ಕರ್ನಾಟಕ ರಾಜ್ಯದ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗಕ್ಕೆ ಅರ್ಜಿಯನ್ನು ಸಲ್ಲಿಸುವುದು ಹಾಗೂ ಖಾಸಗಿ ಸಂಸ್ಥೆಯು ರಾಜ್ಯ ವಿದ್ಯುತ್ ವಿತರಣೆ ಕ್ಷೇತ್ರಕ್ಕೆ ಬರಲು ಬಯಸಿ ಅರ್ಜಿ ಸಲ್ಲಿಸಿರುವುದು ನಿಗಮದ ನೌಕರರು ಮತ್ತು ಗ್ರಾಹಕರಿಗೆ ಆತಂಕಕಾರಿ ವಿಷಯವಾಗಿರುತ್ತದೆ. ಹಾಗೂ ವಿದ್ಯುತ್ ಕಾಯಿದೆ 2003 ಕಾಲಂ 14 ಮತ್ತು 15 ರ ಅಡಿಯಲ್ಲಿ ಖಾಸಗಿ ಕಂಪನಿಗಳು ಸಲ್ಲಿಸಿರುವ ವಿದ್ಯುತ್ ವಿತರಣಾ ಪರವಾನಾಗಿ ನೀಡಿದ್ದಲ್ಲಿ ಸಂಭವಿಸಬಹುದಾದ ಪ್ರಮುಖ ಅನುಕೂಲಗಳೇನೆಂದರೆ ಬಡ ಮತ್ತು ಸಣ್ಣ ಕೈಗಾರಿಕಾ ಉದ್ಯಮಿಗಳ ಹಾಗೂ ರೈತರ ಮೇಲೆ ದರ ಏರಿಕೆಯ ಬರೆ ಬೀಳುತ್ತದೆ ಎಂದು ಮನವಿ ಸಲ್ಲಿಸಿದರು. ಸಾರ್ವಜನಿಕ ಉದ್ಯೋಗ ಭದ್ರತೆಗೆ ಆತಂಕ ನಿರುದ್ಯೋಗಿ ಯುವಕರಿಗೆ ಸರ್ಕಾರಿ ಉದ್ಯೋಗ ನೇಮಕಾತಿ ಸಿಗುವುದಿಲ್ಲ ಎಂಬುದರ ಬಗ್ಗೆ ಮನವಿ ಕೊಟ್ಟರು. ಈ ಸಂದರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷರು ಕೇಂದ್ರ ಕಾರ್ಯ ಸಮಿತಿ ಸದಸ್ಯರು ಹಾಗೂ ಕಾರ್ಯದರ್ಶಿಗಳು ಮತ್ತು ಸಕಲೇಶಪುರ ಕ.ವಿ.ಮ0 ನೌಕರರ ಸಂಘದ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಇದ್ದರು.
