ಮಳೆಯಿಂದ ತಡೆಗೋಡೆ ಕುಸಿತ. ಅನಾಹುತಕ್ಕೂ ಮುನ್ನ ಕ್ರಮಕ್ಕೆ ಆಗ್ರಹ.

ಸಕಲೇಶಪುರ: ತಾಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಣಿಗಲ್ ಗ್ರಾಮದಲ್ಲಿ ಜೂನ್ 28 ಹಾಗೂ 29ರಂದು ಸುರಿದ ಭಾರೀ ಮಳೆಯಿಂದ ಶೇಖರ್ (ದೀಪು ಅವರ ಪುತ್ರ) ಅವರ ಮನೆಯ ತಡೆಗೋಡೆ ಕುಸಿದು ಬಿದ್ದಿದ್ದು, ಮನೆಗೆ ಭಾರೀ ಹಾನಿಯಾಗಿದೆ. ಮನೆ ಅಪಾಯದ ಸ್ಥಿತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆ ಸುರಿದರೆ ಸಂಪೂರ್ಣ ಮನೆ ಕುಸಿಯುವ ಆತಂಕ ಕುಟುಂಬವನ್ನು ಕಾಡುತ್ತಿದೆ.ಸ್ಥಳೀಯರ ಮಾಹಿತಿ ಪ್ರಕಾರ, 2024 ಮತ್ತು 2025ರಲ್ಲೂ ಸುರಿದ ಭಾರೀ ಮಳೆಯಿಂದ ಇದೇ ಮನೆಗೆ ಸಾಕಷ್ಟು ಹಾನಿಯಾಗಿತ್ತು. ಆಗ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಹಾರಕ್ಕಾಗಿ ಮನವಿ ಸಲ್ಲಿಸಲಾಗಿದ್ದರೂ ಇದುವರೆಗೆ ಯಾವುದೇ ರೀತಿಯ ಪರಿಹಾರ ದೊರೆತಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ.ಈ ಬಾರಿ ಮತ್ತೆ ಮಳೆಯಿಂದ ತಡೆಗೋಡೆ ಕುಸಿದಿರುವ ಹಿನ್ನೆಲೆಯಲ್ಲಿ ಕುಟುಂಬ ತೀವ್ರ ಆತಂಕದಲ್ಲಿದೆ. ಮನೆ ಪಕ್ಕದಲ್ಲೇ ಬಿರುಕುಗಳು ಕಾಣಿಸಿಕೊಂಡಿದ್ದು, ಇನ್ನಷ್ಟು ಮಳೆ ಸುರಿದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

error: Content is protected !!