ಅರಬೈಲ್ ಘಾಟ್ ನ ಬಳಗಾರ್ ಬಳಿ ಭೀಕರ ಅಪಘಾತ : ಕ್ರೂಸರ್- ಲಾರಿ ಡಿಕ್ಕಿಯಾಗಿ 6 ಜನ ಬಲಿ

ಯಲ್ಲಾಪುರ : ತಾಲೂಕಿನ ಅರಬೈಲ್ ಘಾಟ್ ಪ್ರವಾಸಕ್ಕೆ ಹೊರಟಿದ್ದ ಕ್ರೂಸರ್ ವಾಹನ, ಲಾರಿ ನಡುವೆ ಡಿಕ್ಕಿ ಸಂಭವಿಸಿ ಕ್ರೂಸರ್ ವಾಹನದಲ್ಲಿದ್ದ 6 ಮಂದಿ ಮೃತರಾಗಿದ್ದು, ಮೂವರಿಗೆ ಗಾಯಗಳಾಗಿವೆ.ಅಪಘಾತದಲ್ಲಿ ಮೃತಪಟ್ಟವರು ಧಾರವಾಡ ಮೂಲದವರು. ಕ್ರೂಸರ್ ವಾಹನ ಚಾಲಕ ಸಂಜೀವ(33), ಬಸವರಾಜ್(48), ಅಭಿಷೇಕ್ ಈಶ್ವರ್(28), ಅಕ್ಷಯ(26), ಅಭಿಷೇಕ್(26), ಮಂಜುನಾಥ್ ಅಶೋಕ್ ಚುಲಕಿ(32) ಮೃತ ದುರ್ದೈವಿಗಳು. ಕ್ರೂಸರ್ ನಲ್ಲಿದ್ದ ಉಳಿದ ಮೂವರಿಗೆ ಗಂಭೀರ ಗಾಯ. ಶಿವರಾಜ್ ದುರ್ಗಪ್ಪ ಮಡಿವಾಳ್(22), ಸಚಿನ್, ಚೆನ್ನಬಸಯ್ಯ ಬಸಲಿಂಗಯ್ಯ ಸಂಪಗಾವ(28)ಗೆ ಗಂಭೀರ ಗಾಯ.ಮೃತರು ಸ್ವಿಗ್ಗಿಯಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ ಧರ್ಮಸ್ಥಳ, ಚಿಕ್ಕಮಗಳೂರು ಕಡೆ ಪ್ರವಾಸಕ್ಕೆ ತೆರಳಿದ್ದರು. ಕ್ರೂಸರ್ ನಲ್ಲಿದ್ದ ಚಾಲಕ ಸೇರಿ ಒಟ್ಟು 9 ಜನ ಪ್ರಯಾಣಿಸುತ್ತಿದ್ದರು. KA19AA5920 ಸಂಖ್ಯೆಯ ಕ್ರೂಸರ್ ವಾಹನ ಅಪಘಾತ ಮಧ್ಯರಾತ್ರಿ 1.30 ರಿಂದ 02ರ ನಡುವೆ ಸಂಭವಿಸಿರುವ ಅಪಘಾತ. ಮೂವರಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು. ಸ್ಥಳಕ್ಕೆ ಯಲ್ಲಾಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!