

ಸಕಲೇಶಪುರ : ಪಟ್ಟಣದ ಆಚಂಗಿಯ ಕಾರ್ತಿಕ್ ಹಾಗೂ ವಿಜಯಲಕ್ಷ್ಮಿ ದಂಪತಿಯ ಪುತ್ರಿ ಆರ್ವಿ .ಕೆ 3ವರ್ಷ 11 ತಿಂಗಳು ಇವರಿಗೆ ಇನ್ನೊಂದು ಪ್ರಶಸ್ತಿಯ ಗರಿ ದೊರಕಿದೆ . ಮೈಸೂರು ಜಿಲ್ಲೆಯ ತಿ.ನರಸೀಪುರದ N G O ಬೆಳಕು ಚಾರಿಟಬಲ್ ಟ್ರಸ್ಟ್ ಇವರೂ ಜ್ಞಾಪಕ ಶಕ್ತಿ ಹಾಗೂ ಬಾಲ ಪ್ರತಿಭೆ ಎಂದು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುತ್ತಾರೆ. ಇಲ್ಲಿಗೆ ಬಂದಿದಂತಹ ಸಾವಿರಾರು ಪ್ರಶಸ್ತಿ ಅರ್ಜಿಗಳಲಿ ಆರ್ವಿಯು ಅತ್ಯಂತ ಕಿರಿಯಳು ಜಿಲ್ಲೆಯಿಂದ ಒಬ್ಬ್ಬರಿಗೆ ಹಾಗೆಯೇ ನಮ್ಮ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಿಂದ ಆರ್ವಿಯೂ ಆಯ್ಕೆ ಆಗಿರುತ್ತಾಳೆ . ಆರ್ವಿಯು ಪ್ರಸ್ತುತ 2026 ರ ಜೂನ್ ನಿಂದ,ಪೊದರ್ ಪ್ರೆಪ್ ಜಂಬೂ ಕಿಡ್ಸ್ Oxford ಸ್ಕೂಲ್ ನಲ್ಲಿ LKG ಓದುತ್ತಿದ್ದಾಳೆ . ಹಾಗೆಯೇ ಆರ್ವಿಗೆ ಮಿನಿಸ್ಟ್ರಿ ಆಫ್ ಡಿಫೆನ್ಸ್ (ಕೇಂದ್ರ ಸರ್ಕಾರ)ಇಂದ ನ್ಯಾಷನಲ್ ಐಕಾನ್ ಅವಾರ್ಡ್ (ಎಜುಕೇಷನಲಿಸ್ಟ್)ವಿಭಾಗದಲ್ಲಿ ಹಾಗು ಪ್ರೈಡ್ ಆಫ್ ಕರ್ನಾಟಕ ಅವಾರ್ಡ್.ಹಾಗೆಯೇ ಅರ್ವಿಯು 64ನೆ ಗಣಪತಿ ಸಮಿತಿ ಯಲ್ಲಿ ಬಾಲಪ್ರತಿಭೆ ಎಂದು ಸನ್ಮಾನಿಸಿ ಪ್ರಶಸ್ತಿ ಹಾಗೂ ಸನ್ಮಾನಿಸಿರುತ್ತಾರೆ ಹಾಸನದಲ್ಲಿ ನೆಡೆದ ಕವಿ ನಮನ ಗಮಕ ನಮನ ಸಾಹಿತ್ಯ ಸಮ್ಮೇಳನದಲ್ಲೂ ಭಾಗವಹಿಸಿ ಸನ್ಮಾನಿಸಿ ಗೌರವಿಸಿದ್ದಾರೆ.ಸಕಲೇಶಪುರದಲ್ಲಿ ನಡೆದ ಹನುಮ ಜಯಂತಿ ಕಾರ್ಯಕ್ರಮ ಹಾಗು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಯಕ್ರಮ ನೀಡಿ ಸನ್ಮಾನಿಸಲಾಗಿದೆ.ಹೊಳೆಮಲ್ಲೇಶ್ವರ ದೇವಸ್ಥಾನ ದ ಶಿವರಾತ್ರಿ ಕಾರ್ಯಕ್ರಮ .ಸಿದ್ದಗಂಗಾ ಮಠ ಮತ್ತು ಸುತ್ತೂರು ಮಠ ಗಳಲಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದು ಹಿರಿಯರಿಂದ ಆಶೀರ್ವಾದ ಪಡೆದಿರುತ್ತಾಳೆ. ಆರ್ವಿ ಯ ಈ ಸಾಧನೆಗೆ ಅವರ ತಾಯಿ ಎಲ್ಲಾ ತರಹದ ತರಬೇತಿಯನ್ನು ನೀಡಿರುತ್ತಾರೆ.ಅತೀ ಕಿರಿಯ ವಯಸ್ಸಿನಲ್ಲೇ ಇಷ್ಟೆಲ್ಲಾ ಸಾಧನೆ ಮಾಡಿ, ಸಕಲೇಶಪುರ ತಾಲೂಕಿನ ಕೀರ್ತಿಯನ್ನು ಹೆಚ್ಚಿಸುತ್ತಿರುವ ಬಾಲಪ್ರತಿಭೆ ಆರ್ವಿ ಕೆ. ಅವರ ಮುಂದಿನ ಸಾಧನೆಗೆ ಸಾರ್ವಜನಿಕರು, ಆಚಂಗಿ ನಿವಾಸಿಗಳು ಹಾಗೂ ಬಂದು, ಮಿತ್ರರು ಹಾರೈಸಿದ್ದಾರೆ.
