
ಸಕಲೇಶಪುರದಲ್ಲಿ ಜುಲೈ 23ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ.
ಸಕಲೇಶಪುರ, ಜು 21-: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆಯುಷ್ ಇಲಾಖೆ, ಹಾಸನ ಇವರ ವತಿಯಿಂದ 2026–27ನೇ ಸಾಲಿನ ರಾಷ್ಟ್ರೀಯ ಆಯುಷ್ ಅಭಿಯಾನದಡಿ ಎಂ.ಎಸ್.ಡಿ. ವಯೋಮಿತ್ರ ಕಾರ್ಯಕ್ರಮದ ಅಂಗವಾಗಿ ಹಿರಿಯ ನಾಗರಿಕರಿಗಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಜುಲೈ 23ರಂದು ಸರ್ಕಾರಿ ತಾಲ್ಲೂಕು ಹೋಮಿಯೋಪತಿ ಆಸ್ಪತ್ರೆ, ಸಕಲೇಶಪುರದಲ್ಲಿ ಆಯೋಜಿಸಲಾಗಿದೆ.ಶಿಬಿರವು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3.30ರವರೆಗೆ ನಡೆಯಲಿದ್ದು, ಸಂಧಿವಾತ, ಕೀಲು ನೋವು, ಕೀಲುಗಳ ಊತ, ಸೊಂಟದ ನೋವು ಸೇರಿದಂತೆ ವಯೋಸಹಜ ಸಮಸ್ಯೆಗಳು, ಮಧುಮೇಹ, ರಕ್ತದೊತ್ತಡ, ಮಲಬದ್ಧತೆ ಹಾಗೂ ನಿದ್ರಾಹೀನತೆ ಮುಂತಾದ ಕಾಯಿಲೆಗಳಿಗೆ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುತ್ತದೆ.ಪ್ರತಿ ತಿಂಗಳ ಮೂರನೇ ಗುರುವಾರ ಆಯೋಜಿಸಲಾಗುವ ಈ ವಯೋಮಿತ್ರ ಕಾರ್ಯಕ್ರಮದ ಶಿಬಿರದಲ್ಲಿ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉಚಿತ ವೈದ್ಯಕೀಯ ಸೇವೆಯ ಪ್ರಯೋಜನ ಪಡೆಯುವಂತೆ ಜಿಲ್ಲಾ ಆಯುಷ್ ಇಲಾಖೆ, ಹಾಸನ ಪ್ರಕಟಣೆಯಲ್ಲಿ ಮನವಿ ಮಾಡಿದೆ.
