
ಸಕಲೇಶಪುರ : ತಾಲೂಕು ಹೆತ್ತೂರಿನ ಪುಟ್ಟಸ್ವಾಮಿಗೌಡ ಮತ್ತು ಪಾರ್ವತಮ್ಮ ಅವರ ಪುತ್ರರಾದ ಹೆಚ್.ಪಿ. ರವಿಕುಮಾರ್ ಅವರು 1996ರಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ವೃತ್ತಿ ನಿಷ್ಠೆ ಮತ್ತು ಸಮಾಜಮುಖಿ ವರದಿಗಾರಿಕೆಗೆ ಈ ಗೌರವ ಲಭಿಸಿದೆ.ಪ್ರಶಸ್ತಿ ಪ್ರದಾನ ಸಮಾರಂಭವು ಜುಲೈ 25ರಂದು ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ನಡೆಯಲಿದ್ದು, ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಹೆಚ್.ಪಿ. ರವಿಕುಮಾರ್ ಅವರಿಗೆ KUWJ ವಿಶೇಷ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಪತ್ರಕರ್ತರು, ಸ್ನೇಹಿತರು ಹಾಗೂ ಬಂಧು ಮಿತ್ರರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
