
ವಕೀಲ, ನಟ ಹಾಗೂ ಸಮಾಜಸೇವಕ ಜಿ.ಎಸ್. ಮುರಳೀಧರ ಅವರಿಗೆ “ಕರುನಾಡಿನ ಸಾಧಕ ಪ್ರಶಸ್ತಿ”.
ಹಾಸನ :- ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಗಂಜಲಗೂಡು ಗ್ರಾಮದ ಹೆಮ್ಮೆಯ ಪುತ್ರ, ವಕೀಲರು, ನಟರು ಹಾಗೂ ಸಮಾಜಸೇವಕರಾಗಿ ಗುರುತಿಸಿಕೊಂಡಿರುವ ಶ್ರೀ ಜಿ.ಎಸ್. ಮುರಳೀಧರ ಅವರಿಗೆ ಚಿತ್ರ ಸಂತೆಯ ವತಿಯಿಂದ ಪ್ರತಿಷ್ಠಿತ “ಕರುನಾಡಿನ ಸಾಧಕ ಪ್ರಶಸ್ತಿ” ಪ್ರದಾನ ಮಾಡಿರುವುದು ಜಿಲ್ಲೆಯ ಜನತೆಗೆ ಹಾಗೂ ಅವರ ಅಭಿಮಾನಿಗಳಿಗೆ ಅತ್ಯಂತ ಸಂತಸದ ಸಂಗತಿಯಾಗಿದೆ. ಜಿ.ಎಸ್. ಮುರಳೀಧರ ಅವರು ಗಂಜಲಗೂಡು ಗ್ರಾಮದ ಸ್ವಾಮಿಗೌಡ ಹಾಗೂ ಶ್ರೀಮತಿ ಸಣ್ಣಮ್ಮ ದಂಪತಿಯ ಪುತ್ರರಾಗಿದ್ದು, ಬಾಲ್ಯದಿಂದಲೇ ಸಮಾಜಮುಖಿ ಚಿಂತನೆ, ಕಲೆ ಮತ್ತು ಸೇವಾ ಮನೋಭಾವವನ್ನು ಬೆಳೆಸಿಕೊಂಡು ಬಂದಿದ್ದಾರೆ. ವಕೀಲ ವೃತ್ತಿಯ ಮೂಲಕ ನ್ಯಾಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅವರು, ಕನ್ನಡ ಚಿತ್ರರಂಗದಲ್ಲಿಯೂ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದು, ನಟನೆಯ ಮೂಲಕ ಕಲಾ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿದ್ದಾರೆ.ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮುರಳೀಧರ ಅವರು ಜನಪರ ಕಾಳಜಿ ಹಾಗೂ ಸೇವಾ ಮನೋಭಾವದಿಂದ ಹಲವು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಅವರ ಬಹುಮುಖ ಪ್ರತಿಭೆ, ಶ್ರಮ ಹಾಗೂ ಸಾಧನೆಗಳನ್ನು ಗುರುತಿಸಿ ಚಿತ್ರ ಸಂತೆಯು ಈ ಗೌರವಾನ್ವಿತ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.”ಕರುನಾಡಿನ ಸಾಧಕ ಪ್ರಶಸ್ತಿ” ಪಡೆದಿರುವುದು ಅವರ ನಿರಂತರ ಪರಿಶ್ರಮ, ಬದ್ಧತೆ ಹಾಗೂ ಸಾಧನೆಗೆ ದೊರೆತ ಮತ್ತೊಂದು ಗೌರವವಾಗಿದೆ. ಜಿ.ಎಸ್. ಮುರಳೀಧರ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಾ, ಅವರು ಮುಂದಿನ ದಿನಗಳಲ್ಲಿಯೂ ಸಮಾಜಸೇವೆ, ಕಲೆ ಹಾಗೂ ವೃತ್ತಿ ಕ್ಷೇತ್ರಗಳಲ್ಲಿ ಮತ್ತಷ್ಟು ಯಶಸ್ಸು ಸಾಧಿಸಿ ಕರುನಾಡಿನ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಹಾರೈಸಲಾಗಿದೆ.
