
ಸಕಲೇಶಪುರ:- ತಾಲೂಕಿನ, ಶುಕ್ರವಾರಸಂತೆ ವಲಯದ ಯಡವರನಹಳ್ಳಿ(ನಲ್ಲುಲ್ಲಿ ), ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಕಲೇಶಪುರ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಉಚಿತ ಬಿಪಿ, ಶುಗರ್ ಟೆಸ್ಟ್, ಹಾಗೂ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮಕ್ಕೆ ಡಾ.ವಾಸುದೇವ , ಡಾ. ನವೀನ್ ಚಂದ್ರ ಶೆಟ್ಟಿ ( ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರು), ಶ್ರೀಯುತ ರಾಜೇಶ ಎಂ. (ಯೋಜನಾಧಿಕಾರಿಗಳು) ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು. ಅಮ್ಮ ಐ ಕೇರ್ ಹಾಸ್ಪಿಟಲ್ ಸಿಬ್ಬಂದಿಗಳು ಅಶ್ವಿನಿ, ಮೊಹಮ್ಮದ್ , ರುದ್ರೇಶ್, ತಪಾಸಣೆ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ 10 ಜನ ಸದಸ್ಯರಿಗೆ ಕನ್ನಡಕ ವಿತರಣೆ ಮಾಡಿದರು. ಹಾಗೂ ಏಳು ಜನ ಫಲಾನುಭವಿಗಳಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲು ಆಯ್ಕೆ ಮಾಡಿಕೊಂಡರು. ಈ ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಮಂಜುಳಾ ಮೇಲ್ವಿಚಾರಕರಾದ ಗೌತಮ್, ಗ್ರಾಮದ ಹಿರಿಯರು, ಜ್ಞಾನವಿಕಾಸ ಕೇಂದ್ರದ ಸದಸ್ಯರು, ಸೇವಾ ಪ್ರತಿನಿಧಿಯವರು ಉಪಸ್ಥಿತರಿದ್ದರು.
