



ಸಕಲೇಶಪುರ : ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳು ಉತ್ತಮ ರೀತಿಯಲ್ಲಿ ಸಾಗುತ್ತಿದ್ದು, ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮತ್ತೆ ನೂತನವಾಗಿ ಅರ್ಜಿ ಸಲ್ಲಿಸುವ ಕಾರ್ಯಕ್ರಮ ಪ್ರಾರಂಭವಾಗಿದ್ದು ಇದರ ಬಗ್ಗೆ ತಾಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತರಿಗೆ ಯಾವುದೇ ತೊಂದರೆ ಆಗದಂತೆ ಫಲಾನುಭವಿಗಳಿಗೆ ಯೋಜನೆಗಳು ತಲುಪಿಸಬೇಕು ಎಂದು ಮುರಳಿ ಮೋಹನ್ ಹೇಳಿದರು.ನೂತನ ಮುಖ್ಯಮಂತ್ರಿಗಳಾದಂತಹ ಡಿ.ಕೆ.ಶಿವಕುಮಾರ್ ರವರ ಮೊದಲ ಕ್ಯಾಬಿನೇಟ್ ನಲ್ಲಿ ನಿರ್ಧರಿಸಿದ ಹಾಗೆ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವ ಕುರಿತಾಗಿ ಹೊಸದಾಗಿ ಅರ್ಜಿ ಕರೆದಿರುವುದರ ಬಗ್ಗೆಯೂ ಕೂಡ ಎಲ್ಲರಿಗೂ ತಿಳಿಸಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿ ಅಡೆತಡೆ ಉಂಟಾಗದೆ ಯೋಜನೆಯು ಪಾಲಿಸಬೇಕೆಂದು ತಿಳಿಸಿ ಮಾಹಿತಿಯನ್ನು ನೀಡಿದರು. ಹಾಗೆಯೇ ಗೃಹಜೋತಿ ,ಯುವ ನಿಧಿ ,ಅನ್ನಭಾಗ್ಯ ಯೋಜನೆಗಳ ಬಗ್ಗೆ ಇಲಾಖೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು. ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಶ್ರಮವಹಿಸಬೇಕೆಂದು ತಿಳಿಸಿದರು.ನಡೆಯುತ್ತಿರುವ ಮಹತ್ವದ ಕಾರ್ಯ ಎಸ್ಐಆರ್ ಮತದಾರರ ಪಟ್ಟಿ ಪರೀಕ್ಷಕರಣೆಯ ಬಗ್ಗೆ ನೆರೆದಿದಂತಹ ಎಲ್ಲಾ ಅಂಗನವಾಡಿ ಕಾರ್ಯಕರ್ತರಿಗೆ ಅಧಿಕಾರಿಗಳಿಗೆ ಅದರ ಬಗ್ಗೆ ಹೆಚ್ಚು ನಿಗಾ ವಹಿಸಿ ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ನಿರ್ವಹಿಸಬೇಕು ಮತದಾರರ ಪಟ್ಟಿಯಲ್ಲಿ ಯಾರು ಹೆಸರು ಕೈಬಿಡದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ತಾಲೂಕು ಅಧಿಕಾರಿಗಳು ಉಪಸ್ಥಿತರಿದ್ದರು.
