ಸಕಲೇಶಪುರ ನಗರದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳು ಹಾಗೂ ಸುರಕ್ಷತಾ ವ್ಯವಸ್ಥೆಗಳ ಕೊರತೆ. ಕ.ರ.ವೇ ಅಧ್ಯಕ್ಷ ರಮೇಶ್ ಪೂಜಾರಿ ಉಪವಿಭಾಗಾಧಿಕಾರಿಗೆ ಮನವಿ.

ಸಕಲೇಶಪುರ : ನಗರದ ಹೃದಯಭಾಗದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಗ್ರಾಹಕರಿಗೆ ಅಗತ್ಯವಿರುವ ಕನಿಷ್ಠ ಮೂಲಭೂತ ಸೌಲಭ್ಯಗಳು ಹಾಗೂ ಸುರಕ್ಷತಾ ವ್ಯವಸ್ಥೆಗಳು ಸಮರ್ಪಕವಾಗಿ ಇಲ್ಲದಿರುವುದು ಗಮನಕ್ಕೆ ಬಂದಿದೆ. ಸ್ಥಳ ಪರಿಶೀಲನೆ ನಡೆಸಿದಾಗ ಈ ಕೆಳಕಂಡ ಗಂಭೀರ ನ್ಯೂನತೆಗಳು ಕಂಡುಬಂದಿವೆ. 1.ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ಪುರಸಭೆಯಿಂದ ಅಗತ್ಯ ಪರವಾನಗಿ ಪಡೆದಿರುವುದಿಲ್ಲ.ಗ್ರಾಹಕರಿಗೆ ವಾಹನ ನಿಲುಗಡೆ (ಪಾರ್ಕಿಂಗ್) ವ್ಯವಸ್ಥೆ ಹಾಗೂ ಬ್ಯಾಂಕ್ ಒಳಗೆ ಕುಳಿತುಕೊಳ್ಳಲು ಸಮರ್ಪಕ ಸ್ಥಳದ ಕೊರತೆ ಇದೆ.2.ಬೆಂಕಿ ಅವಘಡ ಸಂಭವಿಸಿದಲ್ಲಿ ಅದನ್ನು ನಿಭಾಯಿಸಲು ಅಗತ್ಯ ಅಗ್ನಿಶಾಮಕ ಉಪಕರಣಗಳು ಬ್ಯಾಂಕ್‌ನಲ್ಲಿ ಲಭ್ಯವಿಲ್ಲ.ಗ್ರಾಹಕರ ಅಮೂಲ್ಯ ದಾಖಲೆಗಳು ಹಾಗೂ ಚಿನ್ನಾಭರಣಗಳನ್ನು ಸಂಗ್ರಹಿಸಿರುವ ಬ್ಯಾಂಕ್‌ಗೆ ತುರ್ತು ಪರಿಸ್ಥಿತಿಯಲ್ಲಿ ಅಗ್ನಿಶಾಮಕ ವಾಹನಗಳು ಪ್ರವೇಶಿಸಿ ಕಾರ್ಯಾಚರಣೆ ನಡೆಸಲು ಸೂಕ್ತ ಅವಕಾಶವಿಲ್ಲ.3.ರಾಷ್ಟ್ರೀಕೃತ ಬ್ಯಾಂಕ್ ಶಾಖೆ ಆರಂಭಿಸುವ ಸಂದರ್ಭದಲ್ಲಿ ಈ ಎಲ್ಲ ಸುರಕ್ಷತಾ ಹಾಗೂ ಮೂಲಭೂತ ಅಂಶಗಳನ್ನು ಪರಿಗಣಿಸದೆ, ಕೇವಲ ವ್ಯವಹಾರಿಕ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಶಾಖೆಯನ್ನು ಆರಂಭಿಸಿರುವಂತೆ ಕಾಣುತ್ತದೆ. ಇದರಿಂದ ಗ್ರಾಹಕರ ಹಿತಾಸಕ್ತಿ ಕಡೆಗಣಿಸಲ್ಪಟ್ಟಿದೆ.4.ಬ್ಯಾಂಕ್ ಮುಂಭಾಗದ ಸ್ಥಳವನ್ನು ಪುರಸಭೆ ವಾಹನ ನಿಲುಗಡೆಗಾಗಿ ಬಳಸುತ್ತಿದೆ. ದಿನವಿಡೀ ಇಲ್ಲಿ ವಾಹನ ದಟ್ಟಣೆ ಇರುತ್ತದೆ. ಭವಿಷ್ಯದಲ್ಲಿ ಇದೇ ಸ್ಥಳದಲ್ಲಿ ಪುರಸಭೆ ವಾಣಿಜ್ಯ ಸಂಕೀರ್ಣ ನಿರ್ಮಿಸಿದಲ್ಲಿ ಬ್ಯಾಂಕ್‌ಗೆ ಪ್ರವೇಶವೇ ಸಮಸ್ಯೆಯಾಗುವ ಸಾಧ್ಯತೆ ಇದೆ.ಈ ಎಲ್ಲ ವಿಚಾರಗಳನ್ನು ಸ್ಥಳೀಯ ಶಾಖೆಯ ವ್ಯವಸ್ಥಾಪಕರ ಗಮನಕ್ಕೆ ತಂದರೂ, ಅವರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.ಆದ್ದರಿಂದ, ಗ್ರಾಹಕರ ಹಿತದೃಷ್ಟಿಯಿಂದ ಸದರಿ ಬ್ಯಾಂಕ್‌ನ ಕುರಿತು ಸಮಗ್ರ ಪರಿಶೀಲನೆ ನಡೆಸಿ, ಮೇಲ್ಕಂಡ ನ್ಯೂನತೆಗಳನ್ನು ತ್ವರಿತವಾಗಿ ಸರಿಪಡಿಸಿಕೊಳ್ಳುವಂತೆ ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡುವಂತೆ ವಿನಮ್ರವಾಗಿ ಕೋರುತ್ತೇವೆ ಎಂದ ಅಧ್ಯಕ್ಷರಾದ ರಮೇಶ್ ಪೂಜಾರಿ.

Leave a Reply

Your email address will not be published. Required fields are marked *

error: Content is protected !!